6
  • Latest
ಅನಧಿಕೃತ ಮೀನು ಮಾರಾಟಕ್ಕೆ ಪಟ್ಟಣ ಪಂಚಾಯಿತಿ ಸದಸ್ಯರದ್ದೇ ಶ್ರೀರಕ್ಷೆ!: ಪ್ರತಿಫಲವಾಗಿ ಉಚಿತ ಮೀನು-ಮಾಂಸದ ಭಿಕ್ಷೆ

ಅನಧಿಕೃತ ಮೀನು ಮಾರಾಟಕ್ಕೆ ಪಟ್ಟಣ ಪಂಚಾಯಿತಿ ಸದಸ್ಯರದ್ದೇ ಶ್ರೀರಕ್ಷೆ!: ಪ್ರತಿಫಲವಾಗಿ ಉಚಿತ ಮೀನು-ಮಾಂಸದ ಭಿಕ್ಷೆ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅನಧಿಕೃತ ಮೀನು ಮಾರಾಟಕ್ಕೆ ಪಟ್ಟಣ ಪಂಚಾಯಿತಿ ಸದಸ್ಯರದ್ದೇ ಶ್ರೀರಕ್ಷೆ!: ಪ್ರತಿಫಲವಾಗಿ ಉಚಿತ ಮೀನು-ಮಾಂಸದ ಭಿಕ್ಷೆ

ಶ್ರೀ ನ್ಯೂಸ್ by ಶ್ರೀ ನ್ಯೂಸ್
in ಸ್ಥಳೀಯ

ಯಲ್ಲಾಪುರದಲ್ಲಿ ಅನಧಿಕೃತವಾಗಿ ಎಲ್ಲೆಂದರಲ್ಲಿ ಮೀನು-ಮಾಂಸ ಮಾರಾಟ ನಡೆಯುತ್ತಿದೆ.‌ ಇದನ್ನು ತಡೆಯಬೇಕಿದ್ದ ಪಟ್ಟಣ ಪಂಚಾಯಿತಿ, ಜಾಣ ಕುರುಡು ಪ್ರದರ್ಶಿಸುತ್ತಿದೆ.‌ ಇನ್ನೊಂದೆಡೆ ಅನಧಿಕೃತ ಮೀನು-ಮಾಂಸ ಮಾರಾಟಗಾರರಿಗೆ ಪಟ್ಟಣ ಪಂಚಾಯಿತಿಯ ಕೆಲ ಸದಸ್ಯರೇ ಬೆಂಬಲವಾಗಿದ್ದಾರೆ ಎಂಬ ಮಾತೂ ಕೇಳಿ ಬರುತ್ತಿದೆ.

ಅನಧಿಕೃತ ಮೀನು-ಮಾಂಸ ಮಾರಾಟದ ಬಗ್ಗೆ ಪಟ್ಟಣ ಪಂಚಾಯಿತಿಯ ಸಭೆಯಲ್ಲಿ ಆಕ್ರೋಶ ಭರಿತರಾಗಿ ಸದಸ್ಯರು ಮಾತನಾಡುತ್ತಾರೆ. ಆದರೆ ಅದೇ ಪಟ್ಟಣ ಪಂಚಾಯಿತಿಯ ಕೆಲ ಸದಸ್ಯರು ಅನಧಿಕೃತ ವ್ಯಾಪಾರಕ್ಕೆ ಪ್ರೋತ್ಸಾಹಿಸುವುದು ವಿಚಿತ್ರವಾಗಿದೆ.

ಹೊರ ತಾಲೂಕಿನಿಂದ ಬಂದು ಯಲ್ಲಾಪುರದ ತಟಗಾರ ಕ್ರಾಸ್ ಹಾಗೂ ಇತರೆಡೆ ಬೀದಿಯಲ್ಲಿ ಮೀನು ಮಾರುವವರಿದ್ದಾರೆ. ಜೋಡುಕೆರೆ ಬಳಿ ರಾಷ್ಟ್ರೀಯ ಹೆದ್ದಾರಿಯ ಪಕ್ಕವೇ ಮೀನು ಮಾರಲಾಗುತ್ತದೆ. ಹೆದ್ದಾರಿಯಲ್ಲೇ ವಾಹನ ನಿಲ್ಲಿಸಿ, ಮೀನು ಖರೀದಿಗೆ ಜನ ಮುಗಿ ಬೀಳುತ್ತಾರೆ. ಆಗ ಟ್ರಾಫಿಕ್ ಜಾಮ್ ಉಂಟಾಗಿ ಸಮಸ್ಯೆಯಾಗುವುದೂ ಸಾಮಾನ್ಯವಾಗಿದೆ. ದೂರು ಬಂದಾಗ ಒಂದೆರಡು ದಿನ ಮಾರಾಟ ಬಂದ್ ಮಾಡಿಸುವುದು, ನಂತರ ಮತ್ತೆ ಆರಂಭಿಸಲು ಅವಕಾಶ ಕೊಡುವುದು ಪರಿಪಾಠವಾಗಿದೆ.

ಎಲ್ಲೆಂದರಲ್ಲಿ ಮೀನು ಮಾರಾಟ ಮಾಡುವುದಕ್ಕೆ ಕೆಲವು ಸದಸ್ಯರದ್ದೇ ಪ್ರೋತ್ಸಾಹ. ಇದಕ್ಕೆ ಪ್ರತಿಫಲವಾಗಿ ಸದಸ್ಯರ ಮನೆ ಬಾಗಿಲಿಗೇ ಉಚಿತವಾಗಿ ಮೀನು-ಮಾಂಸ ಪೂರೈಕೆಯಾಗುತ್ತದೆ. ಇದು ಸ್ವತಃ ವ್ಯಾಪಾರಿಗಳೇ ಆಡುವ ಮಾತು.

ಮೀನು ಮಾರುಕಟ್ಟೆಯಲ್ಲಿ ಅಧಿಕೃತ ಟೆಂಡರ್ ಪಡೆದು, ಬಾಡಿಗೆ ತುಂಬಿ ವ್ಯಾಪಾರ ನಡೆಸುವವರ ಗೋಳು ಕೇಳುವವರಿಲ್ಲ. ಇನ್ನು ನಾವೂ ಬೀದಿಯಲ್ಲೇ ವ್ಯಾಪಾರ ಮಾಡುವುದೇ ಒಳ್ಳೆಯದು ಎನ್ನುತ್ತಿದ್ದಾರೆ ಮಾರುಕಟ್ಟೆಯ ವ್ಯಾಪಾರಸ್ಥರು.

ShareSendTweetShare
Previous Post

ಮಲೆನಾಡು ಸೊಸೈಟಿ ವಾರ್ಷಿಕ ಸರ್ವಸಾಧಾರಣ ಸಭೆ: ಯುವ ಕೃಷಿ ಸಾಧಕರಿಗೆ ಗೌರವ

Next Post

ಲೋಕೋಪಯೋಗಿ ಇಲಾಖೆ ಆವಾರದಲ್ಲಿ ಇಂಜನಿಯರ್ ದಿನಾಚರಣೆ

Next Post
ಲೋಕೋಪಯೋಗಿ ಇಲಾಖೆ ಆವಾರದಲ್ಲಿ ಇಂಜನಿಯರ್ ದಿನಾಚರಣೆ

ಲೋಕೋಪಯೋಗಿ ಇಲಾಖೆ ಆವಾರದಲ್ಲಿ ಇಂಜನಿಯರ್ ದಿನಾಚರಣೆ

ಕಲ್ಲೇಶ್ವರದಲ್ಲಿ ಸೇವಾ ಪಾಕ್ಷಿಕದ ಅಂಗವಾಗಿ ರಕ್ತದಾನ ಶಿಬಿರ ಸೆಪ್ಟೆಂಬರ್ 17 ಕ್ಕೆ

ಕಲ್ಲೇಶ್ವರದಲ್ಲಿ ಸೇವಾ ಪಾಕ್ಷಿಕದ ಅಂಗವಾಗಿ ರಕ್ತದಾನ ಶಿಬಿರ ಸೆಪ್ಟೆಂಬರ್ 17 ಕ್ಕೆ

ಸಿದ್ದಾಪುರ ಇಲ್ಲೇ ಇರಲಿ, ಯಲ್ಲಾಪುರ ಜಿಲ್ಲಾ ಕೇಂದ್ರವಾಗಲಿ: ನಾಗರಿಕ ವೇದಿಕೆ ಆಗ್ರಹ

ಸಿದ್ದಾಪುರ ಇಲ್ಲೇ ಇರಲಿ, ಯಲ್ಲಾಪುರ ಜಿಲ್ಲಾ ಕೇಂದ್ರವಾಗಲಿ: ನಾಗರಿಕ ವೇದಿಕೆ ಆಗ್ರಹ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page