6

ಬೀಗಾರಿನಲ್ಲಿ ಜಾಂಬವತಿ ಕಲ್ಯಾಣ

ಯಕ್ಷಗಾನ ಮಲೆನಾಡು ಹಾಗೂ ಕರಾವಳಿ ಭಾಗದ ಜನ-ಜೀವನದ ಅವಿಭಾಜ್ಯ ಅಂಗ. ಆಧುನಿಕ ಭರಾಟೆಗಳಿಂದಾಗಿ ಸಂಪ್ರದಾಯಿಕ ಕಲೆಯ ಪ್ರಸರಣಕ್ಕೆ ಹಿನ್ನೆಡೆ ಉಂಟಾಗುತ್ತಿದೆ ಎಂದು ಹಿರಿಯ ಕಲಾವಿದ ಗ. ನಾ. ಕೋಮಾರ ಹೇಳಿದರು.

ಅವರು ಯಲ್ಲಾಪುರ ತಾಲೂಕಿನ ಬೀಗಾರಿನ ಶ್ರೀ ಲಕ್ಷ್ಮಿ
ನರಸಿಂಹ ದೇವಸ್ಥಾನದಲ್ಲಿ ಶ್ರೀಮಾತಾ ಕಲಾ ಕೂಟದ ವತಿಯಿಂದ ಆಯೋಜಿಸಿದ್ದ ತಾಳಮದ್ದಳೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಜ್ರಳ್ಳಿಯ ಸೊಸೈಟಿ ಅಧ್ಯಕ್ಷ ದತ್ತಾತ್ರೇಯ ಭಟ್ಟ ತಾರಗಾರ ಮಾತನಾಡಿ, ತಾಳಮದ್ದಲೆ ಕೇವಲ ಮನರಂಜನೆಗಾಗಿ ಮಾತ್ರವಲ್ಲದೆ ಜನರಲ್ಲಿ ಮೌಲ್ಯಗಳನ್ನು ಬಿತ್ತಲು ಸಹಕಾರಿ ಎಂದರು.

ಸ್ಥಳಿಯರಾದ ವಿ. ಎನ್ ಕೋಮಾರ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಗ. ಸು. ಭಟ್ಟ, ಯುವಕ ಸಂಘದ ಅಧ್ಯಕ್ಷ ಗಣೇಶ್ ಕಿರಗಾರಿ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎನ್.ಐ ಕೋಮಾರ, ಹಿರಿಯ ಯಕ್ಷಗಾನ ಕಲಾವಿದ
ಕೃಷ್ಣ ಭಾಗವತ ಹರಿಮನೆ, ಸಂಘಟಕ ಶಿವರಾಮ ಗಾಂವ್ಕಾರ ಕಲ್ಮನೆ ಭಾಗವಹಿಸಿದ್ದರು. ಶ್ರೀಮಾತಾ ಕಲಾಕೂಟದ ಅಧ್ಯಕ್ಷೆ ಗಾಯತ್ರಿ ಗಾಂವ್ಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಂತರ ಜಾಂಬವತಿ ಕಲ್ಯಾಣ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ದಿನೇಶ್ ಭಟ್ಡ ಅಬ್ಬಿತೋಟ, ಮೇಘಾ ಬಟ್ಲಗುಂಡಿ, ಮದ್ದಲೆವಾದಕರಾಗಿ ನಾಗಪ್ಪ ಕೋಮಾರ ಭಾಗವಹಿಸಿದ್ದರು. ಅರ್ಥದಾರಿಗಳಾಗಿ ಜಿ. ಪಿ ಭಟ್ಟ ಹೊನಗದ್ದೆ, ಆರ್. ವಿ ಹೆಗಡೆ, ಡಿ.ಕೆ ಗಾಂವ್ಕಾರ, ನಾರಾಯಣ ಹೆಗಡೆ ಶಿರಸಿ, ವಿನಯಶ್ರೀ ಗಾಂವ್ಕಾರ ಪಾತ್ರಚಿತ್ರಣ ನೀಡಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page