ಮಂಚಿಕೇರಿ ಸಮೀಪದ ಕೆರೆಹೊಸಳ್ಳಿಯ ಯುವತಿಯೊಬ್ಬಳು ಕಾಣೆಯಾದ ಬಗ್ಗೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಚಿಕೇರಿ ಸಮೀಪದ ಕೆರೆಹೊಸಳ್ಳಿಯ ನಂದಿನಿ ಪುಟ್ಟ ಸಿದ್ದಿ ಕಾಣೆಯಾದ ಯುವತಿ. ಈಕೆ ಮನೆಯಿಂದ ಕಳೆದ ಆಗಸ್ಟ್ 7 ರಂದು ಹೋದವಳು ಕಾಣೆಯಾಗಿದ್ದು, ಮರಳಿ ಬಂದಿಲ್ಲ.
ಯಾರೋ ಅಪಹರಿಸಿಕೊಂಡು ಹೋಗಿರುವ ಶಂಕೆಯಿದೆ ಎಂದು ಯುವತಿಯ ತಾಯಿ ಶರಾವತಿ ಸಿದ್ದಿ ದೂರು ನೀಡಿದ್ದಾರೆ.
ದುಂಡನೆಯ ಮುಖ, ಗೋಧಿ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ ಈಕೆ, ಹಳದಿ ಬಣ್ಣದ ಟಾಪ್, ಕಂದು ಬಣ್ಣದ ಚೂಡಿದಾರ ಪ್ಯಾಂಟ್ ಧರಿಸಿರುತ್ತಾಳೆ. ಕನ್ನಡ, ಮರಾಠಿ ಭಾಷೆ ಮಾತನಾಡುತ್ತಾಳೆ.
ಈಕೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಯಲ್ಲಾಪುರ ಠಾಣೆಗೆ ಮಾಹಿತಿ ನೀಡಬೇಕೆಂದು ಪೊಲೀಸರು ಕೋರಿದ್ದಾರೆ.







