ಯಲ್ಲಾಪುರದ ಸಬಗೇರಿ ಬಳಿ ನೂತನ ಟಿವಿಎಸ್ ಶೋರೂಂ ಮಂಗಳವಾರ ಸಂಜೆ ಉದ್ಘಾಟನೆಗೊಂಡಿತು.
ಶಾಸಕ ಶಿವರಾಮ ಹೆಬ್ಬಾರ ಶೋರೂಂ ಉದ್ಘಾಟಿಸಿ, ಗ್ರಾಹಕರ ಪ್ರೀತಿ, ವಿಶ್ವಾಸದೊಂದಿ, ಉತ್ತಮ ವ್ಯವಹಾರವಾಗಿ ಪ್ರಗತಿ ಕಾಣುವಂತಾಗಲಿ ಎಂದು ಹಾರೈಸಿದರು.
ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಕೇಂದ್ರ ಸರ್ಕಾರ ಜಿ.ಎಸ್.ಟಿ ಸುಧಾರಣೆಯ ಮೂಲಕ ಜನರಿಗೆ ಅನುಕೂಲ ಕಲ್ಪಿಸಿದೆ. ಇದೇ ಸಂದರ್ಭದಲ್ಲಿ ಶೋರೂಂ ಕೂಡ ಉದ್ಘಾಟನೆ ಆಗಿದೆ. ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದರು.
ಜಿ.ಪಂ ಮಾಜಿ ಸದಸ್ಯ ವಿಜಯ ಮಿರಾಶಿ, ಶೋರೂಂ ಮಾಲೀಕ ಭಾಸ್ಕರ ಭಟ್ಟ ಶೀಗೆಪಾಲ ಹಾಗೂ ಕುಟುಂಬದವರು, ಹಿತೈಷಿಗಳು ಭಾಗವಹಿಸಿದ್ದರು. ಮಹಾಬಲೇಶ್ವರ ಭಟ್ಟ ಶೀಗೆಪಾಲ ಸ್ವಾಗತಿಸಿ, ನಿರ್ವಹಿಸಿದರು. ದತ್ತಮೂರ್ತಿ ಹೆಗಡೆ ವಂದಿಸಿದರು.







