6

ಸವಿತಾ ಸಮಾಜ ಸಂಘದ ತ್ರೈಮಾಸಿಕ ಸಭೆ

ಯಲ್ಲಾಪುರದ ನೌಕರ ಭವನದಲ್ಲಿ ಸವಿತಾ ಸಮಾಜ ಸಂಘದ ತ್ರೈಮಾಸಿಕ ಸಭೆ ಶನಿವಾರ ನಡೆಯಿತು.

ಸಮಾಜದ ಹಿರಿಯ ಬುಚ್ಚಣ್ಣ ಯಾಮಕೆ ಮಾತನಾಡಿ, ಸಮಾಜದವರೆಲ್ಲ ಸಂಘಟಿತವಾಗಬೇಕು. ನಮ್ಮ ಸಮಾಜದಲ್ಲಿನ ಬಡವರಿಗೆ, ಪ್ರತಿಭಾವಂತರಿಗೆ ನೆರವಾಗುವ ನಿಟ್ಟಿನಲ್ಲಿ ಸಂಘಟನೆ ಬೆಳೆಯಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ನಾಗರಾಜ ಯಾಮಕೆ, ಮಾತನಾಡಿ ಸಮಾಜದ ಒಳಿತಿಗಾಗಿ ಸಂಘ ರಚನೆಯಾಗಿದೆ. ಸಂಘದ ಚಟುವಟಿಕೆಗಳು ನಿರಂತರವಾಗಿ ನಡಯುತ್ತಿವೆ. ಸಂಘದ ನಿಧಿಯನ್ನು ಹೆಚ್ಚು ಮಾಡಬೇಕಿದೆ. ನಿಧಿ ಬೆಳೆದರೆ ಬಡ ಬಂಧುಗಳಿಗೆ ಸಹಾಯ ಮಾಡಲು ಸಾಧ್ಯ. ಸಮುದಾಯದ ಅನೇಕ ಪ್ರತಿಭೆಗಳನ್ನು ಪ್ರೋತ್ಸಾಹಿಸಲು, ಗೌರವಿಸಲೂ ಸಾಧ್ಯ. ಎಲ್ಲರೂ ಕೈಜೋಡಿಸಿದರೆ ಇದು ಅಸಾಧ್ಯವಲ್ಲ ಎಂದರು.

ಖಜಾಂಚಿ ಪವನ ನಾರಾಯಣ ಯಾಮಕೆ ಹಣಕಾಸಿನ ಸ್ಥಿಗತಿ ಬಗ್ಗೆ ಮಾಹಿತಿ ನೀಡಿದರು. ಅಹಿಂದಾ ರಾಜ್ಯ ಸಂಘಟನೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ನಾಗರಾಜ ಯಾಮಕೆ ಅವರನ್ನು ಸಮಾಜದ ವತಿಯಿಂದ ಗೌರವಿಸಿ, ಅಭಿನಂದಿಸಲಾಯಿತು.

ಸಂಘದ ಪ್ರಮುಖರಾದ ಶಂಕರ ನರಸಪ್ಪ ಹುಟ್ಕರ, ನರಸಿಂಹ ಯಾಮಕೆ, ದೇವಪ್ಪ ಯಾಮಕೆ, ಜೈರಾಮ ಯಾಮಕೆ, ಪ್ರಧಾನ ಕಾರ್ಯದರ್ಶಿ ನವೀನ ನಾಗೇಶ ಯಾಮಕೆ, ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಹ್ಲಾದ ಬುಚ್ಚಣ್ಣ ಯಾಮಕೆ ಸ್ವಾಗತಿಸಿ, ನಿರ್ವಹಿಸಿದರು, ರಾಘವೇಂದ್ರ ಶಂಕರ ಹುಟ್ಕರ ವಂದಿಸಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page