ಶೆಡ್ ನಲ್ಲಿ ಸಾರಾಯಿ ಕುಡಿಯಲು ಅವಕಾಶ: ಹೋಟೆಲ್ ಮಾಲೀಕನ ವಿರುದ್ಧ ಪ್ರಕರಣ
ಯಲ್ಲಾಪುರದ ರವೀಂದ್ರನಗರದಲ್ಲಿ ಹೋಟೆಲ್ ಹಿಂದಿನ ಶೆಡ್ ನಲ್ಲಿ ಸಾರಾಯಿ ಕುಡಿಯಲು ಅವಕಾಶ ಮಾಡಿಕೊಟ್ಟ ಹೋಟೆಲ್ ಮಾಲೀಕನ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರವೀಂದ್ರನಗರದ ಹರ್ಷಾ ಹೋಟೆಲ್ ಮಾಲೀಕ ಮಾರುತಿ ಶೇಷು ನಾಯ್ಕ, ತನ್ನ ಹೋಟೆಲ್ ಹಿಂದಿನ ಶೆಡ್ ನಲ್ಲಿ ಸಾರ್ವಜನಿಕರಿಗೆ ಸಾರಾಯಿ ಕುಡಿಯಲು ಅವಕಾಶ ಮಾಡಿಕೊಟ್ಟಿದ್ದ.
ಈ ವೇಳೆ ದಾಳಿ ನಡೆಸಿದ ಪೊಲೀಸರು 200 ರೂ ಮೌಲ್ಯದ ಸಾರಾಯಿ ವಶಪಡಿಸಿಕೊಂಡಿದ್ದಾರೆ. ಮಾರುತಿ ನಾಯ್ಕ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
