ಕುಮಟಾ: ಅಘನಾಶಿನಿ ನದಿಯ ಗಜನಿ ಪ್ರದೇಶದಲ್ಲಿ ಮೀನುಗಾರಿಕೆಗೆ ತೆರಳಿದ್ದ ರಮೇಶ ನಾರಾಯಣ ಹರಿಕಂತ್ರ (45) ಎಂಬಾತ ಅಲ್ಲಿಯೇ ಸಾವನಪ್ಪಿದ್ದಾನೆ.
ಹಿರೆಗುತ್ತಿಯ ನುಶಿಕೋಟೆ ಬಳಿಯ ಈತ ಜೂ 28ರಂದು ಕೈ ಬಲೆಯನ್ನು ತೆಗೆದುಕೊಂಡು ಹೋಗಿ ಮೀನುಗಾರಿಕೆಗೆ ತೆರಳಿದ್ದ. ಅಘನಾಶಿನಿ ನದಿ ತೀರದಲ್ಲಿ ಕೊಂಚ ಸಮಯ ಮೀನುಗಾರಿಕೆ ನಡೆಸಿದ ನಂತರ ಸುಸ್ತಾಗಿ ದಂಡೆಯ ಮೇಲೆ ಕುಳಿತಿದ್ದ. 10 ಗಂಟೆ ಸುಮಾರಿಗೆ ಮತ್ತೆ ಏಳಲು ಪ್ರಯತ್ನಿಸಿದವನಿಗೆ ಸಾಧ್ಯವಾಗಲಿಲ್ಲ. ಗಜನಿ ಪ್ರದೇಶದಲ್ಲಿಯೇ ಕುಸಿದು ಬಿದ್ದು ಆತ ಸಾವನಪ್ಪಿದ್ದಾನೆ.




Discussion about this post