ಯಲ್ಲಾಪುರ: ಪಟ್ಟಣ ತಿಲಕ್‌ಚೌಕ್’ದಲ್ಲಿ ತಾಲೂಕಾ ಬಿಜೆಪಿ ಘಟಕದ ಕಚೇರಿ ಶುರುವಾಗಿದೆ.
ಈ ಹಿಂದೆ ಬಸ್ ನಿಲ್ದಾಣದ ಬಳಿ ಚುನಾವಣಾ ಕಚೇರಿ ತೆರೆದಿದ್ದ ಬಿಜೆಪಿ ಇದೀಗ ತಿಲಕ್‌ಚೌಕ್’ದಲ್ಲಿನ ನಮೀತಾ ಬೀಡಿಕರ್ ಅವರ ಮನೆ ಮೇಲ್ಬಾಗದ ಜಾಗವನ್ನು ಕಚೇರಿಯನ್ನಾಗಿಸಿಕೊಂಡಿದೆ. ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ `ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಯಕರ್ತರು ತಮ್ಮ ಸಮಸ್ಯೆಗಳ ಬಗ್ಗೆ ಕಚೇರಿಗೆ ಬಂದು ಮಾಹಿತಿ ನೀಡಿ, ಅದರ ಬಗ್ಗೆ ಚರ್ಚಿಸಬಹುದಾಗಿದೆ’ ಎಂದು ತಿಳಿಸಿದರು.

ವನಮಹೋತ್ಸವ
ಇದೇ ವೇಳೆ ಬಿಜೆಪಿಯ ರೈತಮೋರ್ಚಾ ಮತ್ತು ಮಹಿಳಾ ಮೋರ್ಚಾದಿಂದ ನಗರದ ಕಲ್ಮಠದಲ್ಲಿ ವನಮಹೋತ್ಸವ ಆಚರಿಸಲಾಯಿತು. ಪ್ರಮುಖರಾದ ವೆಂಕಟ್ರಮಣ ಬೆಳ್ಳಿ, ಹರಿಪ್ರಕಾಶ ಕೋಣೆಮನೆ, ಶ್ಯಾಮಿಲಿ ಪಾಟಣಕರ, ರೇಖಾ ಹೆಗಡೆ, ರಾಮಚಂದ್ರ ಚಿಕ್ಯಾನಮನೆ ಇತರರು ಮಾತನಾಡಿದರು.
ಬಿಜೆಪಿಯ ನಿಕಟಪೂರ್ವ ಅಧ್ಯಕ್ಷ ಜಿ ಎನ್ ಗಾಂವ್ಕರ, ವಿಕೇಂದ್ರಿಕರಣ ಉಪಾಧ್ಯಕ್ಷ ಪ್ರಮೋದ ಹೆಗಡೆ, ಜಿಲ್ಲಾ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಪ್ರಶಿಕ್ಷಣ ಪ್ರಮುಖ ಗಣಪತಿ ಮಾನಿಗದ್ದೆ, ಸರಸ್ವತಿ ಪಟಗಾರ, ಗಣಪತಿ ಮುದ್ದೇಪಾಲ, ಮಹಿಳಾ ಮೋರ್ಚಾ ಅಧ್ಯಕ್ಷ ಶ್ರುತಿ ಹೆಗಡೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ನಮೀತಾ ಬೀಡಿಕರ, ಮೋರ್ಚಾ ಅಧ್ಯಕ್ಷ ಸುರೇಶ ಸಿದ್ದಿ, ಯುವ ಮೋರ್ಚಾ ಅಧ್ಯಕ್ಷ ರಜತ ಬದ್ದಿ ಇತರರು ಇದ್ದರು. ರವಿ ಕೈಟ್ಕರ ಸ್ವಾಗತಿಸಿದರು. ನಟರಾಜ ಗೌಡ ವಂದಿಸಿದರು.
Discussion about this post