ಕಾರವಾರ: ರವೀಂದ್ರನಾಥ ಕಡಲತೀರದಲ್ಲಿ ಟುಪಲೇವ್ ಯುದ್ಧ ವಿಮಾನ ಹಾಗೂ ಐ.ಎನ್.ಎಸ್ ಚಾಪೆಲ್ ಯುದ್ದ ನೌಕೆ ಪ್ರವೇಶಿಸುವ ಮುನ್ನ ಶಾಸಕ ಸತೀಶ್ ಸೈಲ್ ಹಣ ನೀಡಿ, ಟಿಕೆಟ್ ಪಡೆದರು.
ಯುದ್ಧ ವಿಮಾನ ಉದ್ಘಾಟನಾ ಕಾರ್ಯಕ್ರಮ ಶನಿವಾರ ನಡೆದಿದ್ದು, ಇದಕ್ಕೆ ಚಾಲನೆ ನೀಡಲು ಆಗಮಿಸಿದ್ದ ಸತೀಶ್ ಸೈಲ್ ತಮ್ಮ ಜೊತೆ ಆಗಮಿಸಿದವರ ಟಿಕೆಟ್ ಹಣವನ್ನು ಪಾವತಿಸಿದರು. ಯುದ್ದ ವಿಮಾನ ವೀಕ್ಷಣೆಯ ನಂತರ ಕೆಳಗಿಳಿದು ಬಂದ ಅವರು ನೆರೆದಿದ್ದ ಸಾರ್ವಜನಿಕರಿಗೆ ಕೈ ಮುಗಿದರು.
ನಂತರ ಮಾತನಾಡಿದ ಅವರು `ಈ ಯುದ್ದ ವಿಮಾನ ಮತ್ತು ಯುದ್ಧ ನೌಕೆಗಳು ದೇಶದ ವಾಯುಪಡೆ, ನೌಕಾಪಡೆ ಮತ್ತು ಸೇನೆಯನ್ನು ಸೇರುವ ಜಿಲ್ಲೆಗೆ ಯುವ ಜನತೆಗೆ ತಾನೂ ಒಬ್ಬ ಧೀಮಂತ ಯೋಧನಾಗಬೇಕು ಎಂಬ ಸ್ಪೂರ್ತಿ ನೀಡಲಿದೆ’ ಎಂದರು.
Discussion about this post