6
September 29, 2026

ಟ್ರೇಡಿಂಗ್ ನಲ್ಲಿ ನಷ್ಟ ತಡೆಯಲು ಹೊಸ ಆವಿಷ್ಕಾರ ಮಾಡಿದ ಸೂರಜ್ ಹೆಗಡೆ

ಟ್ರೇಡಿಂಗ್ ಕ್ಷೇತ್ರದಲ್ಲಿನ ಏರಿಳಿತವನ್ನು ಊಹಿಸಲು ಸಾಧ್ಯವಾಗದೇ ಅನೇಕರು ಹಣ ಕಳೆದುಕೊಳ್ಳುವುದು ಸಾಮಾನ್ಯ. ಈ ಸಮಸ್ಯೆಗೆ ಯಲ್ಲಾಪುರದ ತಂತ್ರಜ್ಞ ಸೂರಜ ಹೆಗಡೆ ಅವರು ಒಂದು ಪರಿಹಾರ ಕಂಡುಹಿಡಿದಿದ್ದಾರೆ. ಟ್ರೇಡಿಂಗ್ ಸಮಸ್ಯೆ ಪರಿಹಾರಕ್ಕೆ ತಮ್ಮ ಯು.ಕೆ ಇನ್ಫೊಟೆಕ್ ಸಂಸ್ಥೆಯಿಂದ ಎಐ ಬಾಟ್ ಸ್ಟ್ರಾಟರ್ಜಿ ನೂತನ ಆವಿಷ್ಕಾರವನ್ನು ಮಾಡಿದ್ದಾರೆ.

ದೇಶದ ಅತಿದೊಡ್ಡ ಉದ್ದಿಮೆ ಟ್ರೇಡಿಂಗ್ ಕ್ಷೇತ್ರ. ಕ್ರಿಪ್ಟೊ, ನಿಫ್ಟಿ ಮುಂತಾದೆಡೆ ಹೂಡಿಕೆ ಮಾಡುವ ಜನರು ಮಾರುಕಟ್ಟೆಯಲ್ಲಿ ಏರಿಳಿತದ ಬಗ್ಗೆ ಹಿಡಿತ ಸಾಧಿಸುವುದು ಕಷ್ಟ. ಇದೇ ಕಾರಣಕ್ಕಾಗಿ ಅನೇಕರು ಹಣ ಕಳೆದುಕೊಂಡು ತೊಂದರೆ ಅನುಭವಿಸುತ್ತಾರೆ.

ಇದಕ್ಕೊಂದು ಪರಿಹಾರ ಒದಗಿಸುವುದಕ್ಕೆ ಮುಂದಾದ ಸೂರಜ ಹೆಗಡೆ ನೂತನ ಆವಿಷ್ಕಾರ ಮಾಡಿದ್ದಾರೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ವರ್ಷದ ಅನುಭವ ಹೊಂದಿರುವ ಸೂರಜ ಹೆಗಡೆ ಹೊಸ ಎಐ ಬಾಟ್ ಸ್ಟ್ರಾಟರ್ಜಿ ಕಂಡು ಹಿಡಿದಿದ್ದಾರೆ.

ಈ ಎಐ ಬಾಟ್ ನ ವಿಶೇಷತೆಯೆಂದರೆ ಇದು ಮಾರುಕಟ್ಟೆಯ ಸೂಚ್ಯಂಕಗಳು ಇಳಿಕೆ ಕಂಡಾಗ ಆಟೋಮ್ಯಾಟಿಕ್ ಆಗಿ ಖರೀದಿ ಮಾಡುತ್ತದೆ. ಮಾರ್ಕೆಟ್ ಸೂಚ್ಯಂಕ ಏರಿಕೆಯನ್ನು ಕಾಣುತ್ತಿದ್ದಂತೆ ತಾನಾಗಿಯೇ ಮಾರಾಟ ಮಾಡುತ್ತದೆ. ಇದರಿಂದ ಕ್ರಿಪ್ಟೊ ಹಾಗೂ ನಿಫ್ಟಿ ಟ್ರೇಡರ್ಸ್ ಗಳಿಗೆ ಮಾರುಕಟ್ಟೆಯಲ್ಲಿ ಯಾವುದೇ ನಷ್ಟ ಉಂಟಾಗುವುದಿಲ್ಲ. ತಮ್ಮ ಹಣವನ್ನು ಕಳೆದುಕೊಳ್ಳುವ ಭಯವಿಲ್ಲದೇ ಟ್ರೇಡಿಂಗ್ ಮಾಡಲು ಸಹಕಾರಿಯಾಗಿದೆ.

ಪ್ರಸ್ತುತ ಈ ತಂತ್ರಜ್ಞಾನದ ಮೂಲಕ ಕ್ರಿಪ್ಟೊ ಟ್ರೇಡಿಂಗ್ ನ ಹಲವಾರು ಟೋಕನ್ ಮತ್ತು ಕಾಯಿನ್ ಗಳ ಮೇಲೆ ಪ್ರಯೋಗಾತ್ಮಕವಾದ ಪರಿಶೀಲನೆ ನಡೆಸಲಾಗುತ್ತಿದೆ. ಉತ್ತಮ ಫಲಿತಾಂಶ ದೊರೆಯುತ್ತಿದ್ದು, ನಿರೀಕ್ಷೆಯಂತೆ ಟ್ರೇಡಿಂಗ್ ನಲ್ಲಿನ ನಷ್ಟವನ್ನು ತಡೆಯುತ್ತಿದೆ.

ಇನ್ನು ಕೆಲ ಕಾಲ ಈ ಪ್ರಯೋಗವನ್ನು ಮುಂದುವರಿಸಲಾಗುವುದು. ಯಶಸ್ವೀ ಪರೀಕ್ಷೆಯ ನಂತರ ಇದನ್ನು ಮಾರುಕಟ್ಟೆಗೆ ಪರಿಚಯಿಸಲಾಗುವುದೆಂದು ಸೂರಜ್ ಹೆಗಡೆ ತಿಳಿಸಿದ್ದಾರೆ. ಈ ತಂತ್ರಜ್ಞಾನ ಬಳಕೆಗೆ ಲಭ್ಯವಾದಲ್ಲಿ ಟ್ರೇಡಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ನಿಶ್ಚಿಂತೆಯಿಂದ ವ್ಯವಹಾರ ಮಾಡುವಂತಾಗಲಿದೆ.

You cannot copy content of this page