6

ಬ್ಯಾಂಕಿಂಗ್ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ: SP ಯಶೋಧಾ

  • ಬ್ಯಾಂಕಿಂಗ್ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ: ಯಶೋಧಾ ವಂಟಗೋಡಿ
    ಹಿರೇಕೆರೂರಿನಲ್ಲಿ ಕರ್ನಾಟಕ ಬ್ಯಾಂಕಿನ 987ನೇ ಶಾಖೆ, ಮಿನಿ ಇ-ಲಾಬಿ ಉದ್ಘಾಟನೆ
    ಹಿರೇಕೆರೂರು: ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಬೇಕು. ಅಪರಿಚಿತ ವ್ಯಕ್ತಿಗಳಿಂದ ಬರುವ ಕರೆ, ಸಂದೇಶ ಹಾಗೂ ಲಿಂಕ್‌ಗಳಿಗೆ ಸ್ಪಂದಿಸದೆ ವೈಯಕ್ತಿಕ ಮತ್ತು ಬ್ಯಾಂಕಿಂಗ್ ಮಾಹಿತಿಯನ್ನು ಹಂಚಿಕೊಳ್ಳಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಸಲಹೆ ನೀಡಿದರು.
    ನಗರದಲ್ಲಿ ಗುರುವಾರ ಕರ್ನಾಟಕ ಬ್ಯಾಂಕ್‌ನ 987ನೇ ಶಾಖೆ ಹಾಗೂ ಮಿನಿ ಇ-ಲಾಬಿ ಉದ್ಘಾಟಿಸಿ ಅವರು ಮಾತನಾಡಿದರು. ಬ್ಯಾಂಕ್ ದೇಶಾದ್ಯಂತ ಗುಣಮಟ್ಟದ ಸೇವೆ ಒದಗಿಸುವ ಮೂಲಕ ಗ್ರಾಹಕರ ವಿಶ್ವಾಸ ಗಳಿಸಿದೆ. ಹಿರೇಕೆರೂರಿನಲ್ಲಿ ಆರಂಭವಾಗಿರುವ ನೂತನ ಶಾಖೆಯೂ ಜನರಿಗೆ ಉತ್ತಮ ಸೇವೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.
    ಪೊಲೀಸ್ ಇಲಾಖೆಯ ‘ಆಸರೆ’ ಕಾರ್ಯಕ್ರಮದ ಮೂಲಕ ಒಂಟಿಯಾಗಿ ವಾಸಿಸುವವರ ಸುರಕ್ಷತೆಗೆ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ವಿವರಿಸಿದ ಅವರು, ಸಾರ್ವಜನಿಕರು ಯಾವುದೇ ರೀತಿಯ ಸೈಬರ್ ವಂಚನೆಗೆ ಒಳಗಾಗದಂತೆ ಜಾಗೃತಿ ವಹಿಸಬೇಕು ಎಂದರು.
    ಕರ್ನಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ರಾಘುರಾಮ್ ಎಚ್.ಎಸ್. ಮಾತನಾಡಿ, ಕೃಷಿ, ಕೃಷಿಯೇತರ ಚಟುವಟಿಕೆ ಹಾಗೂ ಉದ್ಯಮಗಳ ಅಭಿವೃದ್ಧಿಗೆ ಬ್ಯಾಂಕ್ ಸದಾ ಬೆಂಬಲ ನೀಡಲಿದೆ. ಬ್ಯಾಂಕಿನ ವಿವಿಧ ಹಣಕಾಸು ಸೇವೆಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ಪ್ರಗತಿ ಸಾಧಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದರು.
    ಉಪ ಪ್ರಧಾನ ವ್ಯವಸ್ಥಾಪಕ ವಿನಯ್ ಕುಲಕರ್ಣಿ, ಹುಬ್ಬಳ್ಳಿ ಪ್ರಾದೇಶಿಕ ಮುಖ್ಯಸ್ಥ ಈರಣ್ಣ ನಾಗರಾಳ, ಕ್ಲಸ್ಟರ್ ಮುಖ್ಯಸ್ಥರಾದ ಸಂಜಯ್ ಗುಂಡಾಳೆ, ಪ್ರಕಾಶ ಬಿ., ಶಾಖಾ ವ್ಯವಸ್ಥಾಪಕ ಸಿದ್ದೇಶ್ ಬಿ.ಎಸ್. ಮತ್ತಿತರರು ಇದ್ದರು.
    ಕಾರ್ಯಕ್ರಮದಲ್ಲಿ ಹಿರಿಯರು ಹಾಗೂ ಉದ್ಯಮಿಗಳಾದ ಶಿವನಗೌಡ, ಬ್ಯಾಂಕಿನ ದೀರ್ಘಕಾಲದ ಗ್ರಾಹಕ ಷಣ್ಮುಖಪ್ಪ ಬಳ್ಳಾರಿ, ಕಟ್ಟಡದ ಮಾಲೀಕ ಲಕ್ಷ್ಮಪತಿ ಬಣಕಾರ ಹಾಗೂ ಎಸ್.ಎಸ್. ಪಾಟೀಲ ಅವರನ್ನು ಸನ್ಮಾನಿಸಲಾಯಿತು.

Related Posts

ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ

Share this… Facebook Pinterest Twitter Linkedin Whatsappಹಲಗೇರಿ–ಹರಿಹರ ಮಾರ್ಗದಲ್ಲಿ 18 ರೋಡ್ ಹಂಪ್ಸ್‌: ಅಧಿಕಾರಿಗಳ ವಿರುದ್ಧ ಬಿ.ಸಿ. ಪಾಟೀಲ್ ಆಕ್ರೋಶ! ಹಾವೇರಿ: ಹಲಗೇರಿಯಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಹರಿಹರಕ್ಕೆ ತೆರಳುವ ರಸ್ತೆಯಲ್ಲಿ 18 ರೋಡ್ ಹಂಪ್ಸ್‌ಗಳನ್ನು ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ…

ದೆಹಲಿ ಜಂತರ್ ಮಂತರ್‌ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು

Share this… Facebook Pinterest Twitter Linkedin Whatsappದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ: ರಾಹುಲ್ ಗಾಂಧಿ ನೇತೃತ್ವದ ಹೋರಾಟದಲ್ಲಿ ಹಾವೇರಿ ಜಿಲ್ಲೆಯ ಶಾಸಕರು ಹಾವೇರಿ: ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ವಿರುದ್ಧದ ಆರೋಪಗಳು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ…

You cannot copy content of this page