ಹಾವೇರಿಯಲ್ಲಿ ಸಿನಿಮಾ ಟಿಕೆಟ್ಗಾಗಿ ಮಹಿಳೆಯರ ಜಡೆಜಗಳ! ಮಾಂಗಲ್ಯ ಸರ ಕಿತ್ತುಕೊಂಡು ಹೊಡೆದಾಟ
ಹಾವೇರಿ: ಸಿನಿಮಾ ಟಿಕೆಟ್ ವಿಚಾರವಾಗಿ ಹಾವೇರಿಯ ಮಾಗಾವಿ ಚಿತ್ರಮಂದಿರದ ಮುಂದೆ ಮಹಿಳೆಯರ ನಡುವೆ ಜಗಳ ನಡೆದಿದ್ದು, ಪರಸ್ಪರ ಹಲ್ಲೆ ಮಾಡಿಕೊಂಡ ಘಟನೆ ನಡೆದಿದೆ.
‘ಪ್ರೇಮದ ಊರಲಿ’ ಸಿನಿಮಾ ವೀಕ್ಷಿಸಲು ಬಂದಿದ್ದ ಮಹಿಳೆಯರ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದ್ದು, ಪರಸ್ಪರ ಮುಖ-ಮೈ ಪರಚಿಕೊಂಡು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಮಹಿಳೆಯರು ಪರಸ್ಪರ ಮಾಂಗಲ್ಯ ಸರ ಕಿತ್ತುಕೊಂಡು ಜಗಳವಾಡಿದ್ದಾರೆ ಎನ್ನಲಾಗಿದೆ.
ಚಿತ್ರಮಂದಿರದ ಮುಂಭಾಗದಲ್ಲೇ ಮಹಿಳೆಯರ ಕಿತ್ತಾಟದಿಂದ ಕೆಲಕಾಲ ಹೈಡ್ರಾಮಾ ಸೃಷ್ಟಿಯಾಗಿದ್ದು, ಸುತ್ತಮುತ್ತಲಿದ್ದವರು ಘಟನೆ ವೀಕ್ಷಿಸಿದ್ದಾರೆ. ಕೊನೆಗೆ ಸಿನಿಮಾ ವೀಕ್ಷಿಸದೇ ಮಹಿಳೆಯರು ವಾಪಸ್ ಊರಿಗೆ ತೆರಳಿದ್ದಾರೆ ಎನ್ನಲಾಗಿದೆ.
ಸಿನಿಮಾ ನೋಡಲು ಬಂದವರು ಚಿತ್ರಮಂದಿರದ ಮುಂದೆಯೇ ಜಗಳವಾಡಿಕೊಂಡ ಘಟನೆ ಸ್ಥಳೀಯರ ಮೊಬೈಲ್ ಗಳಲ್ಲಿ ಸೆರೆಯಾಗಿದೆ








