6

ಹಾವೇರಿಯಲ್ಲಿ ಕಬ್ಬು ಬೆಳೆಗಾರರ ಸಭೆ ರದ್ದು !!

ಹಾವೇರಿ: ಇಂದು ನಡೆಯಬೇಕಿದ್ದ ಕಬ್ಬು ಬೆಳೆಗಾರರ ಸಭೆ ರದ್ದು; ರೈತರು ಸಭೆಗೆ ಬರುವುದು ಬೇಡ – ರೈತ ಸಂಘದ ಮನವಿ

ಕರ‍್ಖಾನೆ ಮಾಲೀಕರು ಸಭೆಗೆ ಗೈರಾಗುವ ಮಾಹಿತಿ ಹಿನ್ನೆಲೆ; ರೈತ ಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ, ಶಶಿಕಾಂತ್ ಗುರೂಜಿ ಸೇರಿದಂತೆ ಪ್ರಮುಖ ನಾಯಕರು ಸಭೆಗೆ ಗೈರು

ಹಾವೇರಿ: ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಕಬ್ಬಿನ ದರ ನಿಗದಿ ವಿಚಾರವಾಗಿ ನವೆಂಬರ್ ೧೪ರಂದು ಮಧ್ಯಾಹ್ನ ೧ ಗಂಟೆಗೆ ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಬೇಕಿದ್ದ ಸಭೆ ರದ್ದಾಗಿದೆ.

ಸಕ್ಕರೆ ಸಚಿವರಾದ ರುದ್ರಪ್ಪ ಮಾನಪ್ಪ ಲಮಾಣಿ ಅವರ ಅಧ್ಯಕ್ಷತೆಯಲ್ಲಿ ಹಾವೇರಿ ಜಿಲ್ಲೆಯ ಎಲ್ಲಾ ಸಕ್ಕರೆ ಕರ‍್ಖಾನೆಗಳ ಮಾಲೀಕರ ಸಭೆ ಕರೆಯಲಾಗಿತ್ತು. ಆದರೆ ಸಭೆಗೆ ಕರ‍್ಖಾನೆ ಮಾಲೀಕರು ಹಾಜರಾಗುವುದಿಲ್ಲ ಎಂಬ ಮಾಹಿತಿ ಖಚಿತವಾಗಿರುವ ಹಿನ್ನೆಲೆಯಲ್ಲಿ ರೈತ ಸಂಘದ ಪ್ರಮುಖ ನಾಯಕರು ಸಭೆಗೆ ಹಾಜರಾಗದಿರಲು ನರ‍್ಧರಿಸಿದ್ದಾರೆ.

ರೈತ ಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ, ಗೌರವಾಧ್ಯಕ್ಷ ಶಶಿಕಾಂತ ಗುರೂಜಿ, ಕಿಸಾನ್ ನಂದಿ ಸೇರಿದಂತೆ ರಾಜ್ಯ ಪದಾಧಿಕಾರಿಗಳು ಸಭೆಗೆ ಬರುವುದಿಲ್ಲ ಎಂದು ಜಿಲ್ಲಾ ಕಬ್ಬು ಬೆಳೆಗಾರರ ರೈತ ಸಂಘ ಹಾಗೂ ಹಸಿರು ಸೇನೆ ತಿಳಿಸಿದೆ.

ಕರ‍್ಖಾನೆ ಮಾಲೀಕರು ಸಭೆಗೆ ಹಾಜರಾಗಿದ್ದರೆ ರೈತ ಸಂಘದ ನಾಯಕರು ತಪ್ಪದೇ ಸಭೆಯಲ್ಲಿ ಭಾಗವಹಿಸುತ್ತಿದ್ದರು. ಆದರೆ ಕರ‍್ಖಾನೆ ಮಾಲೀಕರೇ ಗೈರಾಗುವುದು ಖಚಿತವಾಗಿರುವುದರಿಂದ ಸಭೆಗೆ ಹಾಜರಾಗದಿರಲು ತರ‍್ಮಾನಿಸಲಾಗಿದೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮುಂದಿನ ಸಭೆಯ ದಿನಾಂಕವನ್ನು ನಿಗದಿಪಡಿಸಿ ಮತ್ತೊಮ್ಮೆ ಸಭೆ ಕರೆಯಲಾಗುವುದು. ಆದ್ದರಿಂದ ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರ ರೈತರು ಇಂದು ಮಧ್ಯಾಹ್ನ ೧ ಗಂಟೆಗೆ ನಡೆಯಬೇಕಿದ್ದ ಸಭೆಗೆ ಆಗಮಿಸಬಾರದು ಹಾಗೂ ರೈತ ಸಂಘಕ್ಕೆ ಸಹಕಾರ ನೀಡಬೇಕು ಎಂದು ಜಿಲ್ಲಾ ಕಬ್ಬು ಬೆಳೆಗಾರರ ರೈತ ಸಂಘ ಹಾಗೂ ಹಸಿರು ಸೇನೆ ಮನವಿ ಮಾಡಿದೆ.

ಈ ಕುರಿತು ಜಿಲ್ಲಾ ಅಧ್ಯಕ್ಷ ಅಶೋಕರಡ್ಡಿ ಹನುಮರಡ್ಡಿ ಸೇರಿದಂತೆ ಜಿಲ್ಲೆ ಹಾಗೂ ತಾಲೂಕು ಮಟ್ಟದ ರೈತ ಸಂಘದ ಪದಾಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Related Posts

ಬುಧವಾರ ಸಕ್ಕರೆ ಸಚಿವರ ಮನೆಗೆ ಮುತ್ತಿಗೆ: ಕಬ್ಬು ಬೆಳೆಗಾರರ ಎಚ್ಚರಿಕೆ

Share this… Facebook Pinterest Twitter Linkedin Whatsappಬುಧವಾರ ಸಕ್ಕರೆ ಸಚಿವರ ಮನೆಗೆ ಮುತ್ತಿಗೆ ಹಾಕುತ್ತೇವೆ: ಕಬ್ಬು ಬೆಳೆಗಾರರ ಎಚ್ಚರಿಕೆ! ಕಬ್ಬಿನ ದರ ಘೋಷಣೆಗೆ ರೈತರ ಪಟ್ಟು; ಸಚಿವರ ಮನೆಗೆ ಮುತ್ತಿಗೆ ಹಾಕಿಸಿಕೊಳ್ಳಬಾರದು ಎಂದರೆ ಸರ್ಕಾರಕ್ಕೆ ಇನ್ನೂ ಎರಡು-ಮೂರು ದಿನಗಳ ಕಾಲಾವಕಾಶ…

ಹಾವೇರಿಯಲ್ಲಿ ಯುವ ಸಂಸತ್ತು ಅಧಿವೇಶನ; 112 ವಿದ್ಯಾರ್ಥಿಗಳ ಕಲಾಪ

Share this… Facebook Pinterest Twitter Linkedin Whatsappಯುವಕರೇ ದೇಶದ ಭವಿಷ್ಯದ ಶಿಲ್ಪಿಗಳು: ಸಚಿವ ರುದ್ರಪ್ಪ ಲಮಾಣಿ ಜಿಲ್ಲಾ ಮಟ್ಟದ ಯುವ ಸಂಸತ್ತು ಅಧಿವೇಶನ; 112 ವಿದ್ಯಾರ್ಥಿಗಳಿಂದ ವಿಧಾನಸಭೆ ಕಲಾಪಗಳ ಮಾದರಿ ಪ್ರದರ್ಶನ, ಪ್ರಶ್ನೋತ್ತರ, ಚರ್ಚೆ ಹಾಗೂ ವಿಧೇಯಕಗಳ ಮಂಡನೆ ಹಾವೇರಿ,…

You cannot copy content of this page