ಕಾರವಾರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ನೀರಜ್ ಬಿ.ವಿ. ಅವರ ಸಾಧನೆ ಪರಿಗಣಿಸಿ ಸರ್ಕಾರ ಅವರಿಗೆ `ರಾಜ್ಯಮಟ್ಟದ ಉತ್ತಮ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ’ ಎಂಬ ಪ್ರಶಸ್ತಿ ನೀಡಿದೆ.
ಅವರು ಆರೋಗ್ಯ ಅಭಿಯಾನದ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದರು. ಜಿಲ್ಲೆಯಲ್ಲಿ ಪ್ರಸವ ಪೂರ್ವ ಮತ್ತು ಗರ್ಭ ಪೂರ್ವ ಕಾಯಿದೆಯ ಬಗ್ಗೆ ನಿಗಾವಹಿಸಿದ್ದರು. ಅಂಗಾoಗ ದಾನ ಮತ್ತು ಅಂಗಾಶ ಕಸಿ ಕಾರ್ಯಕ್ರಮಗಳಿಗೆ ಹೆಚ್ಚಿನ ನೊಂದಣಿ ಮಾಡಿಸಿದ್ದರು. ಜೊತೆಗೆ ಇಲಾಖೆ ಅನುದಾನವನ್ನು ಸದ್ಬಳಕೆ ಮಾಡಿಕೊಂಡಿದ್ದರು. ಇದೆಲ್ಲವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
Discussion about this post