ದೇಶ-ವಿದೇಶಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದ ಶಿರಸಿಯ ಡಾ ಶೃತಿ ಹೆಗಡೆ ಇದೀಗ `ವಿಶ್ವಸುಂದರಿ’ಯಾಗಿ ಹೊರ ಹೊಮ್ಮಿದ್ದು, ಅಮೇರಿಕಾ ಜೊತೆ ಇಡೀ ವಿಶ್ವದ ಜನ ಆಕೆಯ ಸೌಂದರ್ಯಕ್ಕೆ ಮರುಳಾಗಿದ್ದಾರೆ.
ಪ್ರಸ್ತುತ ಹುಬ್ಬಳ್ಳಿಯಲ್ಲಿ ವಾಸವಾಗಿರುವ ಡಾ ಶೃತಿ ಹೆಗಡೆ ಶಿರಸಿಯ ಮುಂಡಿಗೆಸರದ ಅಜ್ಜೋರಮನೆಯವರು. ಕೃಷ್ಣ ಹೆಗಡೆ ಹಾಗೂ ಕಮಲಾ ಅವರ ಪುತ್ರಿ. ಅವರು ಚರ್ಮರೋಗ ವಿಷಯದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಕೆಲ ವೆಬ್ ಸಿರಿಸ್’ಗಳಲ್ಲಿ ನಟಿಸಿದ್ದ ಅವರು ಈಚೆಗೆ ಅಮೇರಿಕಾದ ಪ್ಲೋರಿಡಾದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಅಲ್ಲಿ 40 ದೇಶದ ಸುಂದರಿಯರು ಪೈಪೋಟಿಯಲ್ಲಿದ್ದು, ಅವರೆಲ್ಲರನ್ನು ಮೀರಿದ ಸೌಂದರ್ಯ ಹೊಂದಿದ ಶೃತಿ ಹೆಗಡೆ `ವಿಶ್ವ ಸುಂದರಿ’ಯಾಗಿ ಹೊರಹೊಮ್ಮಿದ್ದಾರೆ. 2018ರಲ್ಲಿ `ಮಿಸ್ ಕರ್ನಾಟಕ’ ಸ್ಪರ್ಧಿಯಾಗಿದ್ದರು. ನಂತರ `ಮಿಸ್ ಸೌತ್ ಇಂಡಿಯಾ’ದಲ್ಲಿಯೂ ವಿಜೇತರಾಗಿದ್ದರು. ಇದೀಗ ವಿಶ್ವ ಸುಂದರಿ ಆಗಿ ಹೊರಹೊಮ್ಮಿದ್ದು, ಇಡೀ ವಿಶ್ವವೇ ಶಿರಸಿಯ ಶೃತಿ ಹೆಗಡೆ ಅವರ ಬಗ್ಗೆ ಮಾತನಾಡುತ್ತಿದೆ.
Discussion about this post