6 Skip to content

ನಾಯ್ಕನಕೆರೆ ತಪೋಭೂಮಿಯಲ್ಲಿ ಕಂಗೊಳಿಸಲಿದೆ ಭವ್ಯ ದತ್ತಮಂದಿರ

ಸ್ವಾತಂತ್ರ್ಯ ಪೂರ್ವ ದಲ್ಲಿ ಹಿತ್ಲಳ್ಳಿ ಗ್ರಾಮದ ಬ್ರಹ್ಮಾನಂದ ಗಣೇಶ ಯೋಗಿಗಳು ಸ್ಥಾಪಿಸಿದ ದತ್ತ ಮಂದಿರ ಯಲ್ಲಾಪುರದ ನಾಯ್ಕನಕೆರೆ ಬಳಿಯಿದ್ದು, ನಿತ್ಯ ನೂರಾರು ಭಕ್ತರ ಪಾಲಿಗೆ ಶೃದ್ಧೆಯ ಕೇಂದ್ರವಾಗಿದೆ.
ನೂರಾರು ವರ್ಷ ಹಿಂದಿನ ಪುರಾತನ ದತ್ತಾತ್ರೇಯ ದೇವಸ್ಥಾನ ಹೆದ್ದಾರಿ ಪಕ್ಕದಲ್ಲಿಯೇ ಇದೆ. ದೇವಾಲಯದ ಬಲಗಡೆ ವಿಶಾಲವಾದ ಕೆರೆಯಿದೆ. ಹಿಂದೆ ದಟ್ಟವಾದ ಅರಣ್ಯವಿದೆ. ಮತ್ತೊಂದು ಕಡೆ ಹಸಿರಾದ ಗದ್ದೆ ಬಯಲು. ಅನತಿ ದೂರದಲ್ಲಿಯೇ ಅಡಿಕೆ ತೋಟಗಳ ಸಾಲು. ಸನೀಹದಲ್ಲಿ ಭಕ್ತ ಸಮೂಹ. ಒಟ್ಟಿನಲ್ಲಿ ಪೃಕೃತಿಯ ಮಡಿಲಿನಲ್ಲಿ ಕುಳಿತು ಧ್ಯಾನಿಸುವವರಿಗೆ ಇದೊಂದು ಯೋಗ್ಯ ಸ್ಥಳ. ಹೀಗಾಗಿ ಅಪಾರವಾದ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿರುವ ಇಲ್ಲಿಗೆ ನೆಮ್ಮದಿಯನ್ನು ಅರೆಸಿ ಭಕ್ತರು ಬರುತ್ತಾರೆ. ಬ್ರಹ್ಮಾನಂದ ಗಣೇಶ ಯೋಗಿಗಳು ಸ್ಥಾಪಿಸಿದ ದತ್ತ ಗುರುವನ್ನು ಸ್ಥಾಪಿಸಿದ ನಂತರ ಬಪ್ಪನಕೊಡ್ಲು ಶಿವಾನಂದ ಯೋಗಿಗಳು ಇಲ್ಲಿ ಮಂದಿರ ನಿರ್ಮಿಸಿದರು. ಶಿವಾನಂದ ಯೋಗಿಗಳು ತಪಸ್ಸು ಆಚರಿಸಿದ ಪುಣ್ಯ ಭೂಮಿಯೂ ಇದಾಗಿದೆ.

ದತ್ತ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿರುವ ಚಿತ್ರಣ

ಪ್ರಸ್ತುತ ಈ ಮಂದಿರದ ಜೀರ್ಣೋದ್ಧಾರ ಕೆಲಸ ನಡೆಯುತ್ತಿದೆ. ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಇದೀಗ ಇಲ್ಲಿ ಭವ್ಯವಾದ ಮಂದಿರ ಕಟ್ಟುವ ಸಂಕಲ್ಪ ಮಾಡಿದ್ದಾರೆ. ದತ್ತ ಜಯಂತಿಯ ದಿನ ದತ್ತಗುರುವಿನ ಪುನರ್ ಪ್ರತಿಷ್ಠಾಪನಾ ಕಾರ್ಯ ನಡೆಸಲು ಉದ್ದೇಶಿಸಲಾಗಿದೆ. ನೂತನ ಕಟ್ಟಡ ನಿರ್ಮಾಣಕ್ಕಾಗಿ `ದತ್ತ ಭಿಕ್ಷಾ ಕಾಣಿಕೆ ಸಮರ್ಪಣಾ ಅಭಿಯಾನ’ ನಡೆಯುತ್ತಿದೆ. ದತ್ತಾತ್ರೇಯ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷರಾಗಿ ಗೋಪಾಲಕೃಷ್ಣ ಭಟ್ಟ ಹಂಡ್ರಮನೆಯವರು ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದು, `ದತ್ತ ಭಿಕ್ಷಾ ಕಾಣಿಕೆ ಸಮರ್ಫಣಾ ಅಭಿಯಾನ’ಕ್ಕೆ ಕಾಣಿಕೆ ಸಲ್ಲಿಸುವವರು ಈ ಬ್ಯಾಂಕ್ ಖಾತೆಯನ್ನು ಬಳಸಹುದಾಗಿದೆ.

Bank: Karnataka Bank

Branch: Yellapur

Ac no: 852250010116201

IFSC Code: KARB0000852

2 comments

Leave a Reply

You cannot copy content of this page