ಅಂಕೋಲಾ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗೃಹ ವಿಜ್ಞಾನ ಸಹಾಯಕ ಪ್ರಾಧ್ಯಾಪಕರಾಗಿರುವ ವಿಜಯಾ ಉಜ್ಜನಗೌಡ ಪಾಟೀಲ ಅವರು ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಪಿ ಎಚ್ ಡಿ ಪದವಿ ನೀಡಿದೆ.
`ದಿ ರಿಲೇಶನ್‌ಷಿಪ್ ಬಿಟ್ವೀನ್ ಮೊಬೈಲ್ ಫೋನ್ ಎಡಿಕ್ಷನ್, ಮೆಂಟಲ್ ಹೆಲ್ತ್ ಪ್ರೊಬ್ಲೆಮ್ಸ ಆಂಡ್ ಕೊಪಿಂಗ್ ಸ್ಕಿಲ್ಸ್ ಅಮಂಗ್ ಕಾಲೇಜ್ ಸ್ಟುಡೆಂಟ್ಸ್’ ಎಂಬ ಸಂಶೋಧನಾ ಪ್ರಬಂಧವನ್ನು ಅವರು ರಚಿಸಿದ್ದರು. ಮೈಸೂರು ವಿಶ್ವವಿದ್ಯಾಲಯದ ಮಾನವ ಅಭಿವೃದ್ಧಿ ಪ್ರಾಧ್ಯಾಪಕರಾದ ಡಾ ಕೋಮಲಾ ಎಂ ಇವರಿಗೆ ಮಾರ್ಗದರ್ಶನ ನೀಡಿದ್ದರು.
Discussion about this post