`ಭಾವರಾಮಾಯಣದ `ರಾಮಾವತರಣ’ ಕೃತಿ ಸರಳ ಭಾಷೆ, ಸನ್ನಿವೇಷಗಳ ಸಹಜ ವರ್ಣನೆಯಿಂದ ಮನವನ್ನು ಗೆಲ್ಲುತ್ತದೆ’ ಎಂದು ಸಿದ್ದಾಪುರ ಭಾರತ ಸೇವಾದಳದ ಅಧ್ಯಕ್ಷ ಕೆಕ್ಕಾರ ನಾಗರಾಜ ಭಟ್ಟ ಹೇಳಿದ್ದಾರೆ.
`ಕೃತಿಯಲ್ಲಿ ದಶರಥ ಮಹಾರಾಜನ ರಾಜ್ಯ ಕೋಸಲನಾಡಿನ ಸುಭಿಕ್ಷದ ಕುರಿತು ವರ್ಣನೆ ಓದಿದಾಗ ಸೂರ್ಯವಂಶದ ಮಹತಿ, ದಶರಥ ಚಕ್ರವರ್ತಿಯ ಪರಾಕ್ರಮ, ಆತನ ಧರ್ಮಪ್ರೀತಿ ವ್ಯಕ್ತವಾಗುತ್ತದೆ’ ಎಂದವರು ಅಭಿಪ್ರಾಯಪಟ್ಟರು. `ರಾಮಾವತರಣ ಕೃತಿಯು ಅಯೋಧ್ಯೆಯಲ್ಲಿನ ಧರ್ಮ, ಅರ್ಥ, ಕಾಮ, ಸತ್ಯದ ಬದುಕಿನ ಪರಿಯನ್ನು ವರ್ಣಿಸುತ್ತ ಈ ತಾಣ ಧರೆಯೊಳಗೊಂದು ವೈಕುಂಠದ ಖಂಡ ಎಂಬ ಚಿತ್ರಣವನ್ನು ಕಟ್ಟಿಕೊಡುತ್ತದೆ. ಭಾವರಾಮಾಯಣದ ರಾಮಾವತರಣದ ನಾಂದಿಯು ಗುರುಕರುಣೆಯೊಂದಿರಲು ಕೊರತೆ ಒರತೆಯಾದೀತು ಎಂಬುದನ್ನು ದೃಢಪಡಿಸುವಂತಿದ್ದು ಸಾಹಿತ್ಯಾಸಕ್ತರೆಲ್ಲ ಅನುಭವಿಸಬೇಕು’ ಎಂದವರು ಕರೆ ನೀಡಿದರು.
`ಬಹುತೇಕ ರಾಮಾಯಣ ಕೃತಿಗಳು ಭಾವನಾತ್ಮಕವಾಗಿರದೇ, ಮನರಂಜನಾತ್ಮಕವಾಗಿವೆ. ಆದರೆ ರಾಮಾವತರಣ ಕೃತಿಯು ತನ್ನಲ್ಲಿಯ ವರ್ಣನೆಯ ವಿಶೇಷತೆಯಿಂದಾಗಿ ಅಂತರoಗವನ್ನು ತಟ್ಟುತ್ತದೆ’ ಎಂದು ಜಿ.ಕೆ.ಹೆಗಡೆ ಗೋಳಗೋಡ ಹೇಳಿದರು. `ರಾಮಾವತರಣದಂತಹ ಕೃತಿಗಳು ಪ್ರಕಟವಾಗುವುದರಿಂದ ಅದನ್ನು ಓದಿದ ಸಮಾಜದ ಮೇಲೆ ಉತ್ತಮ ಪರಿಣಾಮವುಂಟಾಗಿ ಸರಿ ದಾರಿಯಲ್ಲಿ ಸಾಗಲು ಪ್ರೇರೇಪಣೆ ನೀಡುತ್ತದೆ’ ಎಂದು ಶ್ರೀ ಸೇವಾ ಸಂಕಲ್ಪ ಟ್ರಸ್ಟಿನ ಮುಖ್ಯಸ್ಥರಾದ ಪಿ.ಬಿ.ಹೊಸೂರ ಅಭಿಪ್ರಾಯ ಹಂಚಿಕೊoಡರು.
Discussion about this post