ಖಾಸಗಿ ವ್ಯಾಪಾರ ಮಳಿಗೆಯಲ್ಲಿ ನೀಡುವ ಆಫರ್’ಗಳಂತೆ ಸರ್ಕಾರ ಸಹ ಆಗಾಗ ಕೆಲ ಆಫರ್ ಬಿಡುತ್ತದೆ. ಪ್ರಸ್ತುತ ಚಾಲ್ತಿಯಲ್ಲಿರುವ ಆಫರ್ ಅಂದರೆ ಅದು ಆಸ್ತಿ ತೆರಿಗೆ!
ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಮುಂಗಡವಾಗಿ ಪಾವತಿಸಿದವರಿಗೆ ಶೇ 5ರಷ್ಟು ರಿಯಯತಿ ಸಿಗಲಿದೆ. ಸ್ವಯಂ ತೆರಿಗೆ ಪಾವತಿ ಉತ್ತೇಜಿಸಲು ಮೊದಲಿನಿಂದಲೂ ಈ ಕ್ರಮ ಜಾರಿಯಲ್ಲಿದ್ದು, ಈ ಸಲ ಜುಲೈ 31ರವರೆಗೆ ಅವಧಿ ವಿಸ್ತರಿಸಲಾಗಿದೆ. ಹೀಗಾಗಿ ಸ್ವಯಂ ಪ್ರೇರಣೆಯಿಂದ ಮುಂಚಿತವಾಗಿ ಆಸ್ತಿ ತೆರಿಗೆ ಪಾವತಿಸಿ, ಹಣ ಉಳಿಸಿ!
Discussion about this post