ಉತ್ತರ ಕನ್ನಡ ಜಿಲ್ಲೆಯಲ್ಲಿ 227 ಗ್ರಾಮ ಪಂಚಾಯತಗಳಿದ್ದು, 205 ಗ್ರಾಮ ಪಂಚಾಯತಗಳಲ್ಲಿ ಗ್ರಾಮ ಒನ್ ಕೆಂದ್ರ ಅನುಷ್ಠಾನಗೊಂಡಿದೆ. ಉಳಿದ 6 ಗ್ರಾಮ ಪಂಚಾಯತಗಳಲ್ಲಿ ಹೊಸದಾಗಿ ಗ್ರಾಮ ಒನ್ ಕೇಂದ್ರ ಅನುಷ್ಠಾನಗೊಳ್ಳಬೇಕಾಗಿದ್ದು, ಆಯ್ದ ಗ್ರಾಮಗಳಲ್ಲಿ ಸಮಗ್ರ ನಾಗರಿಕ ಸೇವಾ ಕೇಂದ್ರ ಗ್ರಾಮ ಒನ್ ಆರಂಭಿಸಲು ಉದ್ದೇಶಿಸಿದ್ದು ಅರ್ಜಿ ಆಹ್ವಾನಿಸಲಾಗಿದೆ. ಭಟ್ಕಳ ತಾಲೂಕಿನ ಮವಳ್ಳಿ, ಶಿರಸಿ ತಾಲೂಕಿನ ಮಂಜಗುಣಿ, ಮೇಲಿನ ಓಣಿಕೇರಿ, ಯಲ್ಲಾಪುರ ತಾಲೂಕಿನ ದೇಹಳ್ಳಿ, ಕಣ್ಣಿಗೇರಿ, ಅಂಕೋಲಾ ತಾಲೂಕಿನ ವಂದಗಿ ಗ್ರಾಮ ಪಂಚಾಯತಗಳಲ್ಲಿ ಗ್ರಾಮ್ ಒನ್ ಕೇಂದ್ರ ನಡೆಸಲುಉ ಆಸಕ್ತಿ ಇರುವವರು ಜುಲೈ 15ರ ಒಳಗೆ ಅರ್ಜಿ ಸಲ್ಲಿಸಬಹುದು. ಇಲ್ಲಿ ನೀಡುವ ಸೇವೆಗೆ ತಕ್ಕಂತೆ ಶುಲ್ಕ ಪಡೆಯಬೇಕಿದ್ದು, ಇದರಿಂದ ಬದುಕು ನಡೆಸಲು ಅಗತ್ಯವಿರುವಷ್ಟು ಆದಾಯವೂ ಸಾಧ್ಯ.
Discussion about this post