ಭಟ್ಕಳ: ಕವಲಕ್ಕಿಯ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಟಾನದ ಬೆಳ್ಳಿ ಹಬ್ಬದ ಪ್ರಯುಕ್ತ ಮುರುಡೇಶ್ವರದ ಬಸ್ತಿಮಕ್ಕಿಯಲ್ಲಿ ಕಿಷ್ಕಿಂಧಾ ಆಖ್ಯಾನ ನಡೆದಿದ್ದು, ನೆರೆದಿದ್ದವರನ್ನು ರಂಜಿಸಿತು.
`ಕಿಷ್ಕಿoದಾ’ ಪ್ರಸಂಗದಲ್ಲಿ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಪರಮೇಶ್ವರ ಭಂಡಾರಿ ಕರ್ಕಿ, ಅರ್ಥದಾರಿಗಳಾಗಿ ವಾಸುದೇವ ರಂಗಾ ಭಟ್ಟ, ರಾಮಚಂದ್ರ ಹೆಗಡೆ ಕೊಂಡದಕುಳಿ, ಜಿ.ಕೆ. ಹೆಗಡೆ ಹರಿಕೇರಿ ಭಾಗವಹಿಸಿದ್ದರು. ರಾಮನಾಗಿ ಪಾತ್ರ ನಿಭಾಯಿಸಿದ ಮೋಹನ ಹೆಗಡೆ ಗಮನ ಸೆಳೆದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಆಚಾರ್ಯ ಭವನದ ಅಧ್ಯಕ್ಷ ಕೃಷ್ಣಾನಂದ ಭಟ್ಟ ಬಲ್ಸೆ `ಯಕ್ಷಗಾನ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ. ಯಕ್ಷಗಾನ ಎನ್ನುವ ಪದವೇ ಧಾರ್ಮಿಕ ಜಾಗೃತಿ ಮೂಡಿಸುತ್ತದೆ’ ಎಂದರು.
ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಟಾನ ಗೋಳಿಕುಂಬ್ರಿಯ ಅಧ್ಯಕ್ಷ ನಾಗರಾಜ ಮಧ್ಯಸ್ಥ, ಹೊನ್ನಾವರ ಹವ್ಯಕ ಮಂಡಳದ ಅಧ್ಯಕ್ಷ ಆರ್.ಜಿ. ಹೆಗಡೆ ವೇದಿಕೆಯಲ್ಲಿದ್ದರು. ಯಕ್ಷರಕ್ಷೆ ಮುರ್ಡೇಶ್ವರದ ಅಧ್ಯಕ್ಷ ಡಾ ಐ ಆರ್ ಭಟ್ಟ ಅವರಿಗೆ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಟಾನದ ಗೌರವ ಸಲ್ಲಿಸಲಾಯಿತು.
Discussion about this post