ಕುಮಟಾ: `ಅಡಿಯಿಂದ ಮುಡಿಯವರೆಗೆ ಭ್ರಷ್ಟರಿಂದ ತುಂಬಿದ ಕಾಂಗ್ರೆಸ್ ಪಕ್ಷ ದಿವಾಳಿಯಾಗಿದ್ದು, ಶಾಸಕರ ಅನುದಾನ ಹಂಚಿಕೆಗೂ ಅಲ್ಲಿ ಹಣವಿಲ್ಲ’ ಎಂದು ಕುಮಟಾ – ಹೊನ್ನಾವರ ಶಾಸಕ ದಿನಕರ ಶೆಟ್ಟಿ ವಾಗ್ದಾಳಿ ನಡೆಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಮೂರು ತಿಂಗಳಿನಿoದ ಗೃಹಲಕ್ಷೀ ಹಣ ಖಾತೆಗೆ ಬಂದಿಲ್ಲ. ಅಕ್ಕಿ ಬದಲು ನೀಡುವ ದುಡ್ಡು ಸಹ ಸಿಕ್ಕಿಲ್ಲ. ಶಾಸಕರಿಗೆ ನೀಡುವ ಅನುದಾನ ಸಹ ಬರಲಿಲ್ಲ. ಒಟ್ಟಿನಲ್ಲಿ ರಾಜ್ಯಬಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೂ ಸರಿ ಇಲ್ಲ’ ಎಂದು ಆರೋಪಿಸಿದರು.
`ಮೂಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಪ್ರಕರಣವನ್ನು ತನಿಖೆಗಾಗಿ ಸಿಬಿಐ ನೀಡಬೇಕು’ ಎಂದು ಆಗ್ರಹಿಸಿದರು
`ಪರಿಶಿಷ್ಟ ಅಭಿವೃದ್ಧಿಗಾಗಿರುವ ವಾಲ್ಮೀಕಿ ನಿಗಮದಲ್ಲಿದ್ದ 187 ಕೋಟಿ ರೂಪಾಯಿಗಳನ್ನು ಲೂಟಿ ಮಾಡಿ ಪರಿಶಿಷ್ಟ ಸಮುದಾಯದವರಿಗೂ ಸರ್ಕಾರ ಮೋಸ ಮಾಡಿದೆ’ ಎಂದು ದೂರಿದರು.
Discussion about this post