ಶಿರಸಿ: ಅರಣ್ಯ ಭೂಮಿ ಹಕ್ಕಿಗೆ ಸಂಬoಧಿಸಿ ಕೆಲ ಸಂಘಟನೆಗಳು ಸುಪ್ರೀಂ ಕೋರ್ಟನಲ್ಲಿ ದಾಖಲಿಸಿದ ಪ್ರಕರಣ ವಿಷಯವಾಗಿ ನ್ಯಾಯವಾದಿ ರವೀಂದ್ರ ನಾಯ್ಕ ಹೋರಾಟ ಮುಂದುವರೆಸಿದ್ದು, ಈ ಬಗ್ಗೆ ವಿಶ್ರಾಂತ ನ್ಯಾಯಮೂರ್ತಿ ನಾಗ್ ಮೋಹನದಾಸ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಮುಂದಿನ ಹೋರಾಟದಲ್ಲಿ ಕೈಗೊಳ್ಳಬಹುದಾದ ಕಾನೂನು ಅಂಶಗಳ ಕುರಿತು ರವೀಂದ್ರ ನಾಯ್ಕ ಮಾತನಾಡಿದ್ದಾರೆ. `ಈ ಪ್ರಕರಣದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಅರಣ್ಯವಾಸಿಗಳ ಪರ ನಿಲುವು ಪ್ರಕಟಿಸುವುದು ಅವಶ್ಯ. ಇಲ್ಲವಾದಲ್ಲಿ ಅರಣ್ಯವಾಸಿಗಳು ನಿರಾಶ್ರಿತರಾಗುವರು’ ಎಂದು ವಿಶ್ರಾಂತ ನ್ಯಾಯಮೂರ್ತಿ ಎಚ್ ಎನ್ ನಾಗ್ ಮೋಹನದಾಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
`ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದಲ್ಲಿ ಕಾನೂನು ಅರ್ಥೈಸುವಿಕೆಯ ಗೊಂದಲದಿoದ ಅರಣ್ಯವಾಸಿಗಳ ಅರ್ಜಿಗಳು ತಿರಸ್ಕಾರವಾಗಿದ್ದು, ಈ ಹಿನ್ನಲೆಯಲ್ಲಿ ಅರಣ್ಯವಾಸಿಗಳಿಗೆ ಅನ್ಯಾಯವಾಗದ ರೀತಿಯಲ್ಲಿ ಮತ್ತು ಭೂಮಿ ಹಕ್ಕು ನೀಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರವು ಸುಪ್ರೀಂ ಕೋರ್ಟನಲ್ಲಿ ದೃಡ ನಿಲುವನ್ನು ಪ್ರಕಟಿಸುವುದು ಅವಶ್ಯ’ ಎಂದು ಎಚ್ ಎನ್ ನಾಗ್ ಮೋಹನದಾಸ್ ಅವರು ಹೇಳಿದ್ದಾರೆ.
`ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದು 17 ವರ್ಷಗಳಾದರೂ ಅರ್ಹ ಅರಣ್ಯವಾಸಿಗಳಿಗೆ ಭೂಮಿ ಹಕ್ಕು ಪಡೆಯುವಲ್ಲಿ ವಿಳಂಬವಾಗುತ್ತಿರುವುದು ವಿಷದಕರ ಸಂಗತಿ’ ಎಂದು ಅವರು ಅಭಿಪ್ರಾಯಪಟ್ಟರು.
`ದೇಶದ ಕಾನೂನು ರಚಿಸುವುದು ಮತ್ತು ತಿದ್ದುಪಡಿ ಮಾಡುವ ಸರ್ವಾಧಿಕಾರ ಜನಪ್ರತಿನಿಧಿಗಳಿಗೆ ಇರುವುದರಿಂದ ಅರಣ್ಯವಾಸಿಗಳಿಗೆ ಭೂಮಿ ಸಾಗುವಳಿ ಹಕ್ಕಿಗೆ ಸಂಬAಧಿಸಿ ಜನ ಪ್ರತಿನಿಧಿಗಳು ಭದ್ದತೆಯನ್ನು ಪ್ರಕಟಿಸಬೇಕು’ ಎಂದು ರವೀಂದ್ರ ನಾಯ್ಕ ಹೇಳಿದರು.
Discussion about this post