ಕಾರವಾರದಲ್ಲಿ ಶಿಕ್ಷಕರಾಗಿರುವ ಅನಿಲ ಮಡಿವಾಳ ಹೊತ್ತಿನ ಊಟ ಬೇಕಾದರೂ ಬಿಡಲು ಸಿದ್ಧ. ಆದರೆ, ಚಿತ್ರ ಬಿಡಿಸುವುದನ್ನು ಮಾತ್ರ ಬಿಡಲಾರರು. ತಮ್ಮೊಳಗಿನ ಕಲೆಯನ್ನು ಅವರು ಅಷ್ಟರ ಮಟ್ಟಿಗೆ ಪ್ರೀತಿಸುತ್ತಾರೆ. ಅವರಿಗೆ ಚಿತ್ರಕಲೆಯೇ ಬದುಕು!
ಸಮುದ್ರ, ದೋಣೆ, ಕಲ್ದಂಡೆಗೆ ಮುತ್ತಿಕ್ಕುವ ನೀರು, ಮೀನು ಹಿಡಿದು ದಡ ಸೇರುತ್ತಿರುವ ಮೀನುಗಾರರರು ಎಲ್ಲವನ್ನು ಅವರು ಕಲಾಕುಂಚದಲ್ಲಿ ಸೆರೆಹಿಡಿದಿದ್ದಾರೆ. ಬಾಲ್ಯದಿಂದಲೇ ಚಿತ್ರಕಲೆ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಬಿಡುವಿನ ವೇಳೆಯಲ್ಲಿ ಬೀಳಿ ಹಾಳೆಗಳ ಮೇಲೆ ಗೀಜುತ್ತಿದ್ದರು. ಅವರು ಗೀಚುವ ಪ್ರತಿ ರೇಖೆಯೂ ಸುಂದರ ಚಿತ್ರವಾಗಿ ಕಾಣುತ್ತಿತ್ತು. ಬಿಳಿ ಹಾಳೆಗಳಿಗೆ ಬಣ್ಣ ತುಂಬುವುದನ್ನು ಕಲಿತ ಅವರು ಇದೀಗ ಚಿತ್ರಕಲೆ ವಿಷಯದಲ್ಲಿ ದೊಡ್ಡ ಹೆಮ್ಮರವಾಗಿ ಬೆಳೆದಿದ್ದಾರೆ. ಕಾರವಾರದಲ್ಲಿ ಮೊದಲ ಹಾಗೂ ಏಕವ್ಯಕ್ತಿ ಚಿತ್ರ ಪ್ರದರ್ಶನ ಮಾಡಿದ ಹೆಗ್ಗಳಿಕೆ ಅನಿಲ ಮಡಿವಾಳರದ್ದಾಗಿದೆ.
ಅವರ ಸಾಧನೆಗೆ ದೆಹಲಿಯ ಕ್ರಿಯೆಟಿವ್ ಆರ್ಟ ಅಕಾಡೆಮಿಯ `ಕಲಾಶ್ರಿ’ ಪ್ರಶಸ್ತಿ ದೊರೆತಿದೆ. ಹುಬ್ಬಳ್ಳಿಯ ಇಂದಿರಾ ಗಾಂಧೀ ಆರ್ಟ ಗ್ಯಾಲರಿ ಅವರ ಚಿತ್ರಗಳನ್ನು ಖರೀದಿಸಿ, ಮಾರಾಟ ಮಾಡುತ್ತದೆ. ಇನ್ನು ಸಾಕಷ್ಟು ಪ್ರಶಸ್ತಿಗಳು ಅವರಿಗೆ ಅರೆಸಿಬಂದಿದೆ. ಗೋಕರ್ಣದಲ್ಲಿ ಬಾಲ್ಯ ಶಿಕ್ಷಣ ಪಡೆದ ಅವರು ಗದಗ ಹಾಗೂ ಧಾರವಾಡದಲ್ಲಿ ಚಿತ್ರಕಲೆ ತರಬೇತಿ ಪಡೆದಿದ್ದು, ಅದೇ ಮುಂದಿನ ಬದುಕಿಗೆ ದಾರಿದೀಪವಾಗಿದೆ.
ಅನಿಲ ಮಡಿವಾಳ ಅವರ ಹಲವು ಚಿತ್ರಗಳು ನಾನಾ ಪುಸ್ತಕಗಳ ಮುಖಪುಟಗಳಾಗಿವೆ. ಅವರ ಬಹುತೇಕ ಚಿತ್ರಗಳಲ್ಲಿ ಪರಿಸರ ಕಾಳಜಿ, ಜೀವ ವೈವಿಧ್ಯ ಎದ್ದು ತೋರುತ್ತದೆ.
Discussion about this post