ಅತ್ಯಂತ ಖಡಕ್ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ನೂತನ ಪೊಲಿಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ಪೊಲೀಸ್ ಠಾಣೆಗಳ ಪರಿಶೀಲನೆಗಾಗಿ ಗೋಕರ್ಣಕ್ಕೆ ತೆರಳಿದ ವೇಳೆ ಅಲ್ಲಿನ ಆತ್ಮಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಎಂ ನಾರಾಯಣ ಅವರು ಬಿಡುವು ಸಿಕ್ಕಾಗಲೆಲ್ಲ ಧಾರ್ಮಿಕ ಕ್ಷೇತ್ರಗಳಿಗೆ ಅವರು ಭೇಟಿ ನೀಡಿ, ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. ಗೋಕರ್ಣದ ವಿವಿಧ ದೇವಾಲಯಗಳಿಗೆ ತೆರಳಿದ ಅವರು ಶ್ರದ್ಧಾ ಭಕ್ತಿಯಿಂದ ಪ್ರಾರ್ಥಿಸಿದರು. ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ ನಂತರ ತಾಮ್ರಗೌರಿ, ಮಹಾಗಣಪತಿ ದೇವರ ದರ್ಶನವನ್ನು ಅವರು ಮಾಡಿದರು. ಶ್ರೀ ಮಹಾಬಲೇಶ್ವರ ದೇವಸ್ಥಾನದ ಮೇಲುಸ್ತುವಾರಿ ಸಮಿತಿ ಸದಸ್ಯ ಮಹಾಬಲ ಉಪಾಧ್ಯ ಪೂಜಾ ಕಾರ್ಯವನ್ನು ನೆರವೆರಿಸಿದರು. ನಂತರ ಸ್ಮರಣಿಕೆ ಮತ್ತು ಪ್ರಸಾದ ನೀಡಿ ಗೌರವಿಸಿದರು. ದೇವಸ್ಥಾನದ ವ್ಯವಸ್ಥಾಪಕ ಸುಬ್ರಹ್ಮಣ್ಯ ಹೆಗಡೆ, ಉಪಾಧಿವಂತ ಮಂಡಳದ ಬಾಲಕೃಷ್ಣ ಜಂಬೆ ಇತರರು ಉಪಸ್ಥಿತರಿದ್ದರು.




Discussion about this post