`ಉತ್ತರ ಕನ್ನಡ ಜಿಲ್ಲೆಯ ಜನರ ರಕ್ತದಲ್ಲಿ ಅತಿಥಿ ಸತ್ಕಾರದ ಗುಣವಿದೆ’ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದ್ದಾರೆ.
ಗೋಕರ್ಣದಲ್ಲಿ ಮಾತನಾಡಿದ ಅವರು `ಪುಣ್ಯಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಯಾತ್ರಿಕನನ್ನು ಇಲ್ಲಿನ ಜನ ಗೌರವಯುತವಾಗಿ ಕಾಣುತ್ತಾರೆ. ಎಲ್ಲರನ್ನು ಸಮಾನವಾಗಿ ನೋಡುವ ಪರಂಪರೆ ಹಿಂದಿನಿoದಲೂ ಇದೆ. ಮನೆಗೆ ಬಂದವರಿಗೆ ಉಪಚರಿಸಿ ಗೌರವಿಸುವ ಸಂಪ್ರದಾಯ ಇಲ್ಲಿನ ಮನೆ ಮನೆಯಲ್ಲಿಯೂ ಬೆಳೆದು ಬಂದಿದೆ. ಇದೇ ಗೋಕರ್ಣದ ಅಸ್ಮಿತೆ’ ಎಂದು ಹೇಳಿದರು.
`ಕಲೆ, ಸಾಹಿತ್ಯಕ್ಕೆ ಉತ್ತರ ಕನ್ನಡ ಜಿಲ್ಲೆ ಪ್ರಸಿದ್ಧ. ಯಕ್ಷಗಾನ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವ ಕ್ಷೇತ್ರ ಇದು’ ಎಂದರು. `ಸಮಾಜದಲ್ಲಿನ ಕೆಟ್ಟದನ್ನು ಮರೆತು ಒಂದಾಗಿ ಬದುಕು ಕಟ್ಟಿಕೊಳ್ಳುವ ಪರಿಪಾಠವನ್ನು ಎಲ್ಲರೂ ಬೆಳಸಿಕೊಳ್ಳಬೇಕು. ಜಾತಿ ವ್ಯವಸ್ಥೆಯಿಂದ ಜನರನ್ನು ದೂರ ಮಾಡುವ ಮನೋಭಾವನೆ ಬದಲಾಗಬೇಕು’ ಎಂದು ಅವರು ಅಭಿಪ್ರಾಯಪಟ್ಟರು.




Discussion about this post