ಯಲ್ಲಾಪುರ: ಅರಬೈಲ್ ಘಟ್ಟದಲ್ಲಿ ಪದೇ ಪದೇ ಅಪಘಾತವಾಗುವುದನ್ನು ಮನಗಂಡ ಯಲ್ಲಾಪುರ ಪೊಲೀಸರು ಕೆಲ ಸುರಕ್ಷತಾ ಕ್ರಮಗಳನ್ನು ಜರುಗಿಸಿದ್ದಾರೆ.
ಅಪಾಯಕಾರಿ ತಿರುವುಗಳಲ್ಲಿ ಎದುರಿನಿಂದ ಬರುವ ವಾಹನ ಕಾಣದ ಕಾರಣ ಅಪಘಾತಗಳ ಪ್ರಮಾಣ ಹೆಚ್ಚಾಗಿತ್ತು. ಈ ಹಿನ್ನಲೆ ತಿರುವುಗಳಲ್ಲಿ `ಪೀನ್ ಕನ್ನಡಿ’ಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ `ಹೈವೆ ಪೆಟ್ರೋಲ್’ ಪೊಲೀಸ್ ವಾಹನ ಹೆದ್ದಾರಿಯಲ್ಲಿ ಗಸ್ತು ತಿರುಗುತ್ತಿದ್ದು, ಅದರಲ್ಲಿರುವ ಸಿಬ್ಬಂದಿ ಅಪಘಾತ ಆದ ತಕ್ಷಣ ಅಲ್ಲಿಗೆ ತೆರಳಿ ನೊಂದವರಿಗೆ ನೆರವು ನೀಡುವ ಕೆಲಸ ಮಾಡುತ್ತಿದ್ದಾರೆ. ತುರ್ತು ಸನ್ನಿವೇಶದಲ್ಲಿ 112ಗೆ ಕರೆ ಮಾಡಿ ನೆರವು ಪಡೆಯುವಂತೆ ಪೊಲೀಸರು ಕೋರಿದ್ದಾರೆ.
Discussion about this post