6 Skip to content

ಮಳೆಗಾಲದ ಮನರಂಜನೆ: ಜುಲೈ 13ಕ್ಕೆ ಚಂದ್ಗುಳಿಯಲ್ಲಿ ಯಕ್ಷಗಾನ

ಯಲ್ಲಾಪುರ: ಜುಲೈ 13ರ ಶನಿವಾರ ಚಂದ್ಗುಳಿಯ ಗಂಟೆ ಗಣಪತಿ ದೇವಾಲಯ ಭವನದಲ್ಲಿ ಸಂಜೆ 6ಗಂಟೆಗೆ `ಸುದರ್ಶನ ವಿಜಯ’ ಎಂಬ ಯಕ್ಷಗಾನ ನಡೆಯಲಿದೆ.
ದಂಡ್ಕಲ್’ನ ಯಕ್ಷ ಚಂದನ ಸಂಸ್ಥೆಯವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೆರವಿನಲ್ಲಿ ಈ ಪ್ರದರ್ಶನ ಆಯೋಜಿಸಿದ್ದಾರೆ. ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಯಕ್ಷಗಾನ ವೀಕ್ಷಣೆಗೆ ಆಗಮಿಸಲಿದ್ದಾರೆ. ವಿನಯ ಭಟ್ಟ ಬೇರೂಳ್ಳಿ, ನಾಗರಾಜ ಭಟ್ಟ ಕುಂಕಿಪಾಲ್, ಸನ್ಮಯ ಭಟ್ಟ ಮಲವಳ್ಳಿ, ವೆಂಕಟೇಶ ಜೋಗರಮಕ್ಕಿ ಹಾಗೂ ನಿತಿನ್ ದಂಡಕಲ್ ಪಾತ್ರ ನಿಭಾಯಿಸಲಿದ್ದಾರೆ. ಹಿಮ್ಮೇಳದಲ್ಲಿ ದಂಡಕಲ್’ನ ಸತೀಶ ಹೆಗಡೆ, ನಂದನ ಹೆಗಡೆ, ಶಂಕರ ಭಾಗ್ವತ ಯಲ್ಲಾಪುರ, ಪ್ರಸನ್ನ ಭಟ್ಟ ಹೆಗ್ಗಾರ್, ನಾರಾಯಣ ಭಟ್ಟ ಚಂದ್ಗುಳಿ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಈ ಮಳೆಗಾಲದ ಮನರಂಜನೆಗೆ ನೀವು ಬನ್ನಿ, ನಿಮ್ಮವರನ್ನೂ ಕರೆತನ್ನಿ!

Leave a comment

Leave a Reply

You cannot copy content of this page