ಉತ್ತರ ಕನ್ನಡ ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ವಿವಿಧ ಕಾರಣಗಳಿಂದಾಗಿ ಖಾಲಿಯಾಗಿರುವ ಅಂಗನವಾಡಿ ಕಾರ್ಯಕರ್ತೆ/ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 81 ಅಂಗನವಾಡಿ ಸಹಾಯಕಿ, 263 ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಯೋಗ್ಯರ ಹುಡುಕಾಟ ನಡೆದಿದೆ. ಆಸಕ್ತರು ಅಗಷ್ಟ್ 12 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ತಾಲೂಕಾವಾರು ವಿವರ:
ಅಂಕೋಲಾ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 3, ಅಂಗನವಾಡಿ ಸಹಾಯಕಿ 17, ಭಟ್ಕಳ ತಾಲ್ಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 7, ಅಂಗನವಾಡಿ ಸಹಾಯಕಿ 15, ಹಳಿಯಾಳ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 12 ಅಂಗನವಾಡಿ ಸಹಾಯಕಿ 20, ದಾಂಡೇಲಿ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 4, ಅಂಗನವಾಡಿ ಸಹಾಯಕಿ 12, ಹೊನ್ನಾವಾರ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 4, ಅಂಗನವಾಡಿ ಸಹಾಯಕಿ 29, ಜೋಯಿಡಾ ತಾಲೂಕಿನಲ್ಲಿ ಅಂಗನವಾಡಿ ಸಹಾಯಕಿ 28, ಕಾರವಾರ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 2, ಅಂಗನವಾಡಿ ಸಹಾಯಕಿ 6, ಕುಮಟಾ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 3, ಅಂಗನವಾಡಿ ಸಹಾಯಕಿ 20, ಮುಂಡಗೋಡ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 10, ಅಂಗನವಾಡಿ ಸಹಾಯಕಿ 29 ಸಿದ್ದಾಪುರ ತಾಲ್ಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 7, ಅಂಗನವಾಡಿ ಸಹಾಯಕಿ 17, ಶಿರಸಿ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 24, ಅಂಗನವಾಡಿ ಸಹಾಯಕಿ 55, ಯಲ್ಲಾಪುರ ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆ 5, ಅಂಗನವಾಡಿ ಸಹಾಯಕಿ 15. ಹುದ್ದೆಗಳು ಖಾಲಿ ಇವೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂರ್ಪರ್ಕಿಸಿ. ಆನ್ ಲೈನ್ ಅರ್ಜಿಗೆ https://karnemakaone.kar.nic.in/abcd/ ಭೇಟಿ ನೀಡಿ.
Discussion about this post