ಪರವಾನಿಗೆ ನೀಡದ ಕಾಂಗ್ರೆಸ್ | ಪಟ್ಟುಬಿಡದ ಬಿಜೆಪಿ
ಯಲ್ಲಾಪುರ: ವಜ್ರಳ್ಳಿಯ ವೀರಸಾವರ್ಕರ್ ಪ್ರತಿಮೆ ವಿಚಾರ ಇದೀಗ ವಿವಾದದ ಕೇಂದ್ರವಾಗಿದೆ. ಗ್ರಾಮಸಭೆಯಲ್ಲಿ ಈ ವಿಷಯ ಪ್ರಸ್ತಾಪ ಬಂದಾಗ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ವಾಗ್ವಾದ ನಡೆದಿದ್ದು, ಆಡಳಿತದಲ್ಲಿರುವ ಕಾಂಗ್ರೆಸ್ಸಿಗರ ವರ್ತನೆ ವಿರುದ್ಧ ಅನೇಕರು ಕಿಡಿಕಾರಿದ್ದಾರೆ.
ವೀರ ಸಾರ್ವರ್ಕರ್ ಪ್ರತಿಮೆ ಅನಾವರಣ ವಿಷಯವಾಗಿ ಮಾತನಾಡಿದ ಸಮಿತಿ ಅಧ್ಯಕ್ಷ ವಿ ಎನ್ ಭಟ್ಟ ನಡಿಗೆಮನೆ `ಎಂಟು ತಿಂಗಳ ಹಿಂದೆ ಪ್ರತಿಮೆ ಸ್ಥಾಪನೆಯ ಪರವಾನಿಗೆಗೆ ಪಂಚಾಯತಗೆ ಅರ್ಜಿ ಕೊಡಲಾಗಿದೆ. ಆದರೆ, ಈವರೆಗೂ ಪರವಾನಿಗೆ ನೀಡಿಲ್ಲ. ಈ ಬಗ್ಗೆ ಗ್ರಾಮಸಭೆಯಲ್ಲಿ ಪ್ರಸ್ತಾಪಿಸಿದಾಗ ಆಡಳಿತದಲ್ಲಿರುವ ಕಾಂಗ್ರೆಸ್ಸಿಗರು ಅನಗತ್ಯವಾಗಿ ರಾಜಕೀಯ ನಡೆಸಿದ್ದಾರೆ’ ಎಂದು ದೂರಿದರು.
ಬಿಜೆಪಿ ಮಂಡಳಾಧ್ಯಕ್ಷ ಹೇಳುವುದೇನು?
`ಗ್ರಾಮದ ಜನ ನಿರ್ಣಯಿಸಿದ ಸ್ಥಳದಲ್ಲಿಯೇ ವೀರ ಸಾವರ್ಕರರ ಪುತ್ಥಳಿ ನಿರ್ಮಿಸುತ್ತೇವೆ. ಇದಕ್ಕೆ ಯಾರೇ ಅಡ್ಡ ಬಂದರೂ ನಾವು ಸಹಿಸುವುದಿಲ್ಲ’ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಹೇಳಿದ್ದಾರೆ. `ಪುತ್ಥಳಿ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸುವುದು ಸ್ವಾತಂತ್ರ ಸೇನಾನಿಗೆ ಮಾಡಿದ ಅಪಮಾನ’ ಎಂದವರು ಅಭಿಪ್ರಾಯಪಟ್ಟಿದ್ದಾರೆ.
Discussion about this post