ಕುಮಟಾ: ಬಾಲಗೃಹ ಪೀಡೆ ನಿವಾರಣೆಯಿಂದ ಪ್ರಸಿದ್ಧಿ ಪಡೆದಿರುವ ಹಳೇ ಹೆರವಟ್ಟಾ ದೇವಿಯ ಗುಡಿಗೆ ಇದೀಗ ಕಂಟಕ ಎದುರಾಗಿದೆ.
ದೇವಸ್ಥಾನದ ಮೇಲ್ಭಾಗದಿಂದ ಹರಿದು ಬರುವ ಮಳೆ ನೀರು ಗಟಾರದಲ್ಲಿ ಸರಾಗವಾಗಿ ಹರಿಯುತ್ತಿಲ್ಲ. ಕಾಲುವೆ ಒತ್ತುವರಿ ನಡೆದ ಪರಿಣಾಮ ದೇವರ ಗುಡಿ ಒಳಗೆ ರಸ್ತೆಯಂಚಿನ ನೀರು ನುಗ್ಗುತ್ತಿದೆ. ಕಾಲುವೆ ಸಹ ಸಣ್ಣದಾಗಿರುವುದು ಇನ್ನೊಂದು ಸಮಸ್ಯೆ ಎಂದು ಅರ್ಚಕ ಗುರುನಾಥ ಗುನಗಾ ಹೇಳಿದ್ದಾರೆ.
`10 ವರ್ಷಗಳ ಹಿಂದೆ ಈ ಸಮಸ್ಯೆ ಇರಲಿಲ್ಲ. ನಂತರ ಸುತ್ತಲಿನ ಗದ್ದೆ ಖರೀದಿಸಿದವರು ಅಲ್ಲಿ ಕಪೌಂಡ್ ನಿರ್ಮಿಸುವಾಗ ಕಾಲುವೆ ಒತ್ತುವರಿ ಮಾಡಿದ್ದಾರೆ. ಕಾಲುವೆ ಸ್ವಚ್ಚಗೊಳಿಸುವುದರ ಜೊತೆ ಒತ್ತುವರಿ ತೆರವು ಮಾಡಬೇಕು’ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಣ್ಣಯ್ಯ ಪೈ ಆಗ್ರಹಿಸಿದ್ದಾರೆ.
Discussion about this post