ಭಟ್ಕಳ: ಹೆಬಳೆ ಹೆರ್ತಾರ ಗ್ರಾಮದ ಕಲ್ಪನಾ ಮಾಸ್ತಿ ಮೊಗೇರ ರಾಷ್ಟ್ರೀಯ ಚಾರ್ಟರ್ಡ್ ಅಕೌಂಟoಟ್ (ಸಿ.ಎ.) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಜರುಗಿದ ಸಿಎ ಪರೀಕ್ಷೆಯನ್ನ ಕಲ್ಪನಾ ಎದುರಿಸಿದ್ದರು. 2022ರಲ್ಲಿ ಗ್ರೂಪ್ 1 ಸಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಇದೀಗ ಗ್ರೂಪ್ 2 ಪರೀಕ್ಷೆಯಲ್ಲೂ ಉತ್ತಮ ಅಂಕ ಪಡೆದಿದ್ದಾರೆ. ಮುಂಡಳ್ಳಿ ಮೊಗೇರಕೇರಿ ಸೀತಾ ಮತ್ತು ಮಾಸ್ತಿ ಮೊಗೇರ ದಂಪತಿಯ ಪುತ್ರಿ. ಮೀನುಗಾರಿಕೆ ಅವರ ಕುಟುಂಬದ ಮುಖ್ಯ ಕಸುಬು.
Discussion about this post