ಯಲ್ಲಾಪುರ: ಆಧಾರ್ ಕಾರ್ಡ ತಿದ್ದುಪಡಿ ಹಾಗೂ ಹೊಸದಾಗಿ ನೋಂದಣಿ ಅಂಚೆ ಕಚೇರಿಯ ಹೊಣೆಯಲ್ಲಿದ್ದು, ಈ ಕೆಲಸಕ್ಕಾಗಿ ಅಲ್ಲಿ ತೆರಳುವವರಿಗೆ `ನಾಳೆ ಬನ್ನಿ’ ಎನ್ನಲಾಗುತ್ತಿದೆ. `ಕಂಪ್ಯುಟರ್ ಅವ್ಯವಸ್ಥೆ, ನುರಿತ ಸಿಬ್ಬಂದಿ ಕೊರತೆ, ನೆಟ್‌ವರ್ಕ ಸಮಸ್ಯೆ ಸೇರಿ ನಾನಾ ಬಗೆಯ ದೋಷಗಳು ಅಂಚೆ ಇಲಾಖೆಯನ್ನು ಆವರಿಸಿಕೊಂಡಿದೆ.
ಇದಕ್ಕೆ ಪರಿಹಾರ ಒದಗಿಸಲು ಜುಲೈ 15ರಿಂದ ಯಲ್ಲಾಪುರದಲ್ಲಿ ಆಧಾರ್ ಕುರಿತಾದ ಶಿಬಿರ ನಡೆಯಲಿದೆ. `ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ನಾಡಕಚೇರಿ, ಕರ್ನಾಟಕ ಒನ್, ಬಿಎಸ್‌ಎನ್‌ಎಲ್ ಕಚೇರಿ, ಕೆಲ ಗ್ರಾಮ ಒನ್ ಕಚೇರಿಗಳಲ್ಲಿ ಆಧಾರ್ ಕೆಲಸ ನಡೆಯುತ್ತಿದೆ. ಯಲ್ಲಾಪುರದಲ್ಲಿ ಸಾಕಷ್ಟು ದೂರು ಬಂದ ಕಾರಣ ಜುಲೈ 15ರಿಂದ ಇಲ್ಲಿ `ಆಧಾರ್ ಶಿಬಿರ’ ಆಯೋಜಿಸಲಾಗಿದ್ದು, ನಿತ್ಯ 150 ಜನರಿಗೆ ಸೇವೆ ನೀಡಲಾಗುತ್ತದೆ. ಜನರ ಸಮಸ್ಯೆ ನಿವಾರಣೆ ಆಗುವವರೆಗೂ ಶಿಬಿರ ನಡೆಯಲಿದೆ. ವಿವಿಧ ಶಾಲೆಯಲ್ಲಿಗಳಲ್ಲಿ ಹಾಗೂ ನಂತರ ತಹಶೀಲ್ದಾರ್ ಕಚೇರಿ ಹಾಗೂ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಶಿಬಿರ ನಡೆಯಲಿದೆ. ಅಂಚೆ ಕಚೇರಿಯ ವ್ಯವಸ್ಥೆ ಸಹ ಸರಿಯಾಗಲಿದೆ’ ಎಂದು ಆಧಾರ್ ಸಂಯೋಜಕ ಮಹಾಬಲೇಶ್ವರ ದೇಸಾಯಿ S News ಡಿಜಿಟಲ್’ಗೆ ತಿಳಿಸಿದರು. `10 ವರ್ಷ ಕಳೆದಿರುವ ಆಧಾರ್ ಕಾರ್ಡ ಅಪ್‌ಡೇಟ್ ಮಾಡಬೇಕಿದ್ದು, ಆನ್‌ಲೈನ್ ಮೂಲಕ ಉಚಿತವಾಗಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ವಿಳಾಸ ಬದಲಾವಣೆ ಸಹ ಆನ್‌ಲೈನ್ ಮೂಲಕ ಮಾಡಿಕೊಳ್ಳಬಹುದು’ ಎಂದವರು ವಿವರಿಸಿದರು.
ಆಧಾರ್ ಸಮಸ್ಯೆಗಳ ಬಗ್ಗೆ ಗಣಪತಿ ವಾಗಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದರು.
Discussion about this post