ಅಕ್ಕ-ಪಕ್ಕದವರ ಜಗಳಕ್ಕೆ ಅಡಿಕೆ ಫಸಲು ಬಲಿ | ನ್ಯಾಯಾಲಯದಿಂದ ಠಾಣೆಗೆ ಬಂದ ಪ್ರಕರಣ | ಪೊಲೀಸರಿಗೆ ತಲೆಬಿಸಿಯಾದ ವೈಯಕ್ತಿಕ ಕಲಹ
ಯಲ್ಲಾಪುರ: ಹಿತ್ಲಳ್ಳಿ ಬಳಿಯ ನಾಳಿಸರದ ರಾಮಚಂದ್ರ ನರಸಿಂಹ ಹೆಗಡೆ (69) ಹಾಗೂ ಅದೇ ಊರಿನ ವಿನಯ ನಾಗೇಂದ್ರ ಹೆಗಡೆ (38) ನಡುವೆ ಅಡಿಕೆ ತೋಟ ಹಾಗೂ ಅತಿಕ್ರಮಣ ಭೂಮಿಗೆ ಸಂಬoಧಿಸಿದ ವಿವಾದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ನಡುವೆ ಈ ಇಬ್ಬರು ಕುಟುಂಬದವರ ನಡುವೆ ನಡೆದ ಇನ್ನೊಂದು ಕಲಹ ನ್ಯಾಯಾಲಯದಿಂದ ಪೊಲೀಸ್ ಠಾಣೆಗೆ ವರ್ಗವಾಗಿದೆ.
ಫೆ 18ರಂದು ವಿನಯ ಹೆಗಡೆ ಇಬ್ಬರು ಕೂಲಿ ಕೆಲಸದವರ ಜೊತೆ ವಿವಾದಿತ ತೋಟಕ್ಕೆ ಪ್ರವೇಶಿಸಿದ್ದಾರೆ. ಅಲ್ಲಿನ ಅಡಿಕೆಗಳನ್ನು ಅವರು ಕೆಳಗೆ ಇಳಿಸಿದನ್ನು ನೋಡಿದ ರಾಮಚಂದ್ರರ ಪತ್ನಿ ಸೀತಾ ಹೆಗಡೆ ಇದನ್ನು ತಡೆದಿದ್ದಾರೆ. `ನಮ್ಮ ತೋಟಕ್ಕೆ ಬರಬೇಡಿ’ ಎಂದು ಆಕೆ ತಾಕೀತು ಮಾಡಿದ್ದಾರೆ. ಆಗ ವಿನಯ ಹೆಗಡೆ ಸೀತಾ ಹೆಗಡೆ ಅವರಿಗೆ ಕತ್ತಿ ತೋರಿಸಿ ನಿಂದಿಸಿದ್ದಾರೆ. `ತಡೆಯಲು ಬಂದರೆ ಕೊಲೆ ಮಾಡಿ ಶವ ಬಾವಿಗೆ ಹಾಕುವೆ’ ಎಂದು ಬೆದರಿಸಿದ್ದಾರೆ. ಇದಾದ ನಂತರ ಅಲ್ಲಿನ 30 ಅಡಿಕೆ ಕೊನೆಗಳೊಂದಿಗೆ ವಿನಯ ಹೆಗಡೆ ಪರಾರಿಯಾಗಿದ್ದಾರೆ.
Discussion about this post