ಲಿಂಗತ್ವ ಅಲ್ಪಸಂಖ್ಯಾತರಿಗೂ ಗೃಹಲಕ್ಷ್ಮಿ ಯೋಜನೆಯ 2000 ರೂ ಹಣ ಕೊಡುವಂತೆ ಅವರು ಜಿಲ್ಲಾಡಳಿತಕ್ಕೆ ಮನವಿ ನೀಡಿದ್ದಾರೆ.
ಅಂತರoಗ ಸಂಘದಿoದ ಮನವಿ ನೀಡಿದ ಅವರು `ಗೃಹಲಕ್ಷ್ಮಿ ಯೋಜನೆಯ ಫಲ ನಮಗೂ ಬೇಕು’ ಎಂದು ಕೇಳಿದ್ದಾರೆ. ಹೊನ್ನಾವರದ ಆಯಿಷಾ, ಭೂಮಿಕಾ, ದಾಂಡೇಲಿಯ ಭೂಮಿಕಾ, ಪುಂಡಲೀಕ, ಅಂಕೋಲಾದ ಶ್ವೇತಾ ಮನವಿ ನೀಡಿದವರು. `ಸ್ವಂತ ಮನೆ ಇಲ್ಲದ ಕಾರಣ ನಮಗೆ ತೊಂದರೆ ಆಗುತ್ತಿದೆ. ನಮಗೆ ಆಶ್ರಯ ಮನೆ ಕೊಡಿ’ ಎಂದು ಆಯಿಷಾ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಸರ್ಕಾರದಿಂದ ಸ್ಪಂದನೆ
ಲಿoಗತ್ವ ಅಲ್ಪಸಂಖ್ಯಾತರಿಗೆ ಗೃಹಲಕ್ಷ್ಮಿ ಯೋಜನೆಯಡಿ ಪ್ರಯೋಜನ ಪಡೆಯಲು ಅನುವಾಗುವಂತೆ ಗೃಹಲಕ್ಷ್ಮಿ ಯೋಜನೆಯ ತಂತ್ರಾoಶದಲ್ಲಿ ಅವಕಾಶ ನೀಡಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರ ಗುರುತಿನ ಚೀಟಿಯನ್ನು ಪರಿಗಣಿಸಲು ಸರ್ಕಾರವು ಅನುಮೋದನೆ ನೀಡಿದೆ.




Discussion about this post