ಸಿದ್ದಾಪುರ: ಹಾಸಿಕಟ್ಟಾ ಮಾದೇವ ರಾಮಾ ಮೋಗೇರ್ (68) ಎಂಬಾತ ವಿಷ ಕುಡಿದು ಸಾವನಪ್ಪಿದ್ದಾನೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಈತ ಈಚೆಗೆ ದಿನವಿಡೀ ಮದ್ಯದ ನಶೆಯಲ್ಲಿರುತ್ತಿದ್ದ. ಒಂಟಿಯಗಿ ಜೀವಿಸಿದ್ದ ಈತ ಸರಿಯಾಗಿ ಊಟ, ತಿಂಡಿ ಸಹ ಮಾಡುತ್ತಿರಲಿಲ್ಲ. ಜುಲೈ 12ರಂದು ವಿಷ ಸೇವಿಸಿ ಅಸ್ವಸ್ಥನಾದವನನ್ನು 108 ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಜುಲೈ 13ರ ಸಂಜೆ ಈತ ಸಾವನಪ್ಪಿದ ಬಗ್ಗೆ ಆತನ ಅಣ್ಣನ ಮಗ ರಾಮಚಂದ್ರ ಮೊಗೇರ್ ಇದೀಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.




Discussion about this post