ಪ್ರತಿ ಚುನಾವಣೆ ನಂತರ ಗೆದ್ದ ಪಕ್ಷಗಳು `ಅಭಿನಂದನಾ ಸಭೆ’ ನಡೆಸಿದರೆ, ಸೋತ ಪಕ್ಷಗಳು `ಆತ್ಮಾವಲೋಕನ’ ಸಭೆ ನಡೆಸುತ್ತವೆ. ಆದರೆ, ಈ ಸಲ ಉತ್ತರ ಕನ್ನಡ ಜಿಲ್ಲೆಯ ಲೋಕಸಭೆ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಈವರೆಗೂ ಕಾರ್ಯಕರ್ತರನ್ನು ಕರೆದು ಮಾತನಾಡಿಸಿಲ್ಲ.
ಸೋಲಿನ ಲೆಕ್ಕಾಚಾರ ನಡೆಸಲು ಕಾಂಗ್ರೆಸ್ ಬೆಂಗಳೂರಿನಲ್ಲಿ ಸತ್ಯಶೋಧನ ಸಮಿತಿ ರಚಿಸಿ ಅಲ್ಲಿಯೇ ಸಭೆ ನಡೆಸಿದ್ದು, ಇದರಲ್ಲಿ ಪಕ್ಷದೊಳಗಿನ ಆಂತರಿಕ ಕಚ್ಚಾಟ ಬಹಿರಂಗಗೊAಡಿದೆ. ಈ ಸಭೆಯಲ್ಲಿ ಪಕ್ಷ ಸಂಘಟನೆಗೆ ಮುಂದಿನ ನಿಲುವಿನ ಬಗ್ಗೆ ಮಾತ್ರ ಅಂತಿಮವಾಗಿಲ್ಲ. ಉತ್ತರ ಕನ್ನಡ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಅಧಿಕೃತ ಕಾಂಗ್ರೆಸ್ ಶಾಸಕರಿದ್ದಾರೆ. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರ ಪುತ್ರ ವಿವೇಕ್ ಹೆಬ್ಬಾರ್ ಅವರು ಸಹ ಕೆಪಿಸಿಸಿ ಸದಸ್ಯರಾಗಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗೆ ಇಷ್ಟು `ಶಕ್ತಿ’ ಇದ್ದರೂ ಚುನಾವಣೆ ಮುಗಿಯುತ್ತಿದ್ದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಹೀಗೆ ಮುಂದುವರೆದರೆ ಕಾಂಗ್ರೆಸ್ ಅವರನ್ನು ಸಹ ಕಳೆದುಕೊಳ್ಳಲಿದೆ ಎಂದು ಕೆಲವರು ಅಳಲು ತೋಡಿಕೊಂಡಿದ್ದಾರೆ.
ಲೋಕಸಭೆಯಲ್ಲಿ ಬಿಜೆಪಿ ಹಾಲಿ ಸಂಸದರಾಗಿದ್ದ ಅನಂತಕುಮಾರ್ ಅವರ ಟಿಕೆಟ್ ತಪ್ಪಿಸಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಟಿಕೇಟ್ ನೀಡಿದ್ದರು. ಇದರಿಂದ ಕಾಂಗ್ರೆಸ್ಸಿಗೆ ಲಾಭ ಎನ್ನುವ ಲೆಕ್ಕಾಚಾರವಿತ್ತು. ಆದರೆ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ, ಸ್ಥಳೀಯವಾಗಿರುವ ಶಾಸಕರ ನಿರ್ಧಾರ ಹಾಗೂ ಬಿಜೆಪಿ ಶಾಸಕರ ಅಂತರAಗ ಬೆಂಬಲ ಇದ್ದರೂ ಕಾಂಗ್ರೆಸ್ಸಿಗೆ ಗೆಲುವು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಗಟ್ಟಿಯಾಗಿದ್ದರೂ ಪಕ್ಷ ಸಂಘಟನೆ ಸರಿಯಾಗಿ ಮಾಡದ ಕಾರಣ ಲೋಕಸಭೆಯಲ್ಲಿ ಹಿನ್ನಡೆಯಾಯಿತು. ಚುನಾವಣೆ ಮುಗಿದ ನಂತರ ಯಾವ ನಾಯಕರು ಕಾರ್ಯಕರ್ತರನ್ನು ಮಾತನಾಡಿಸಿಲ್ಲ.




Discussion about this post