ಕುಮಟಾ ಹೊಸ ಬಸ್ ನಿಲ್ದಾಣದ ತುಂಬ ಹೊಂಡಗಳೇ ತುಂಬಿದ್ದು, ನಿತ್ಯ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಇಲ್ಲಿ ಸಂಚರಿಸುವ ಬಸ್ಸುಗಳು ಸಹ ಹೊಂಡದಲ್ಲಿ ಬಿದ್ದು ಏಳುವುದು ಅನಿವಾರ್ಯವಾಗಿದ್ದು, ಬಸ್ಸಿನ ಒಳಗಿದ್ದ ವೃದ್ಧರಿಗೆ ಹಾಗೂ ರೋಗಿಗಳಿಗೆ ನರಕ ತೋರಿಸುತ್ತಿದೆ. ಹೊಂಡದಲ್ಲಿನ ಕೆಸರು ನೀರು ಬಸ್ ನಿಲ್ದಾಣದ ಅಂಚನಲ್ಲಿರುವ ಅಕ್ಕ-ಪಕ್ಕದವರ ಮೈಗೆ ಸಿಡಿಯುತ್ತಿದೆ. ಬಸ್ ನಿಲ್ದಾಣದ ಒಳಗೆ ಪ್ರವೇಶಿಸುವ ಬೈಕ್ ಸವಾರರು ಹೊಂಡದ ಆಳ-ಅಗಲ ಅರಿಯದೇ ಪೆಟ್ಟು ಮಾಡಿಕೊಂಡಿದ್ದಾರೆ. ಬಸ್ ನಿಲ್ದಾಣದ ಸಮಸ್ಯೆ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ಹೇಳುತ್ತಾರೆ. ಆದರೆ, ಹೊಂಡ ತುಂಬುವ ಕೆಲಸ ಮಾತ್ರ ಯಾರಿಂದಲೂ ನಡೆದಿಲ್ಲ.
Discussion about this post