6 Skip to content

ಮಳೆ ಅವಾಂತರ: ಪ್ರವಾಸಿಗರು ಕಂಗಾಲು!

ಕುಮಟಾ: ಕರಾವಳಿಯಲ್ಲಿ ಸುರಿಯುತ್ತಿರುವ ಮಳೆ ಗೋಕರ್ಣದಲ್ಲಿ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ವಾರಾಂತ್ಯದ ಹಿನ್ನಲೆ ಕ್ಷೇತ್ರಕ್ಕೆ ಆಗಮಿಸಿದ ಪ್ರವಾಸಿಗರು ಮಳೆ ನೋಡಿ ಕಂಗಾಲಾಗಿದ್ದಾರೆ.
ಇಲ್ಲಿನ ಮಹಾಗಣಪತಿ ಮಂದಿರದ ಬಳಿಯ ರಸ್ತೆ ಜಲಾವೃತಗೊಂಡಿದೆ. ರಥಬೀದಿಯವರೆಗೂ ನೀರು ನಿಂತಿದ್ದು, ಜನರ ಓಡಾಟಕ್ಕೆ ಸಮಸ್ಯೆಯಾಗಿದೆ. ಶನಿವಾರ ಸಂಜೆ ತಾರಮಕ್ಕಿ ಸರ್ಕಾರಿ ಶಾಲೆಯ ಹತ್ತಿರ ಧರೆ ಕುಸಿದಿದ್ದರಿಂದ ಓಡಾಟಕ್ಕೆ ಸಮಸ್ಯೆಯಾಗಿತ್ತು. ಅಲ್ಲಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿರುವುದು ಹಾಗೂ ರಸ್ತೆಯಲ್ಲಿ ಮಣ್ಣು ಕುಸಿದಿದೆ.

Leave a comment

Leave a Reply

You cannot copy content of this page