ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮತ್ತೆ ಮಳೆ ಜೋರಾಗಿದೆ. ಹೀಗೆ ಮುಂದುರೆದಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ತುಂಬುವ ಸಾಧ್ಯತೆ ಹೆಚ್ಚಿದೆ.
ವಡ್ಡಿ ಮಾರ್ಗವಾಗಿ ಶಿರಸಿ – ಗೋಕರ್ಣ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಚರಂಡಿಯನ್ನು ಕೆಲವಡೆ ಮುಚ್ಚಿದ್ದರಿಂದ ಆ ಭಾಗದ ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆಯ ಕೆಲವು ಕಡೆ ಚಿಕ್ಕ ಮಕ್ಕಳು ಮುಳುಗುವುಷ್ಟರ ಮಟ್ಟಿಗೆ ಹೊಂಡವಾಗಿದೆ. ರಭಸ ಮಳೆಗೆ ಅಲ್ಲಲ್ಲಿ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದ್ದು, ಈವರೆಗೆ ಯಾವುದೇ ಜೀವ ಹಾನಿ ವರದಿಯಾಗಿಲ್ಲ. ತದಡಿಯ ರಾಮಚಂದ್ರ ಜನ್ನ ಬೇತಾಳಕರ ಅವರ ಮನೆ ಮೇಲೆ ತೆಂಗಿನ ಮರ ಬಿದ್ದಿದೆ.
Discussion about this post