ಜುಲೈ 15ರ ಸೋಮವಾರ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಶಿರಸಿ, ಸಿದ್ದಾಪುರ, ಹಾಗೂ ಜೊಯಿಡಾ ತಾಲೂಕಿನ ಮಕ್ಕಳು ಶಾಲೆಗೆ ಬರುವ ಹಾಗಿಲ್ಲ. ಉಳಿದ ತಾಲೂಕಿನ ಮಕ್ಕಳು ಶಾಲೆಗೆ ಬರಬೇಕಿದೆ.
ಉತ್ತರ ಕನ್ನಡ ಜಿಲ್ಲೆಯ 8 ತಾಲೂಕಿನ ಶಾಲೆಗಳಿಗೆ ಸೋಮವಾರ ಜಿಲ್ಲಾಡಳಿತ `ಮಳೆ ರಜೆ’ ಘೋಷಿಸಿದೆ. ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜುಗಳಿಗೆ ಈ ರಜೆ ಅನ್ವಯವಾಗಲಿದೆ. ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ತಾಲೂಕುಗಳನ್ನು ಗಮನಿಸಿ, ತಹಶೀಲ್ದಾರ್ ಹಾಗೂ ಶಿಕ್ಷಣಾಧಿಕಾರಿಗಳಿಂದ ವರದಿ ಪಡೆದು ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.




Discussion about this post