ಕುಮಟಾ: ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಆಗಿರುವ ಕೆಡಿಸಿಸಿ ಬ್ಯಾಂಕ್ ಕತಗಾಲದಲ್ಲಿ ಶಾಖೆ ಶುರು ಮಾಡಿದೆ.
ಈ ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಯಲ್ಲಾಪುರ ವಿಧಾನಸಭಾ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ನೂತನ ಶಾಖೆ ಉದ್ಘಾಟಿಸಿದರು. ಇದಕ್ಕೂ ಮುನ್ನ ತಾಲೂಕಿನ ಹೆಗಡೆ ಗ್ರಾಮದಲ್ಲಿ ಸಹ ನೂತನ ಶಾಖೆಗೆ ಚಾಲನೆ ದೊರೆಯಿತು. ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗಜಾನನ ಪೈ, ಬಾಬಣ್ಣ ಸುಂಕೇರಿ, ಪ್ರಕಾಶ ಗುನಗಾ ಇನ್ನಿತರರು ಬ್ಯಾಂಕಿನ ಕಚೇರಿ ವೀಕ್ಷಿಸಿದರು.
Discussion about this post