ಭಟ್ಕಳ: ಶಿರಾಲಿ ಚಿತ್ರಾಪುರ ಗುತ್ತಿಗೆದಾರ ದಿನಕರ ಸಂಜೀವ ಆಚಾರಿ (72) ಅವರ ಮನೆಗೆ ನುಗ್ಗಿದ ಕಳ್ಳರು ದೇವರ ಗರ್ಭಗುಡಿಯಲ್ಲಿದ್ದ ಬೆಳ್ಳಿ ಹಾಗೂ ಬಂಗಾರದ ವಸ್ತುಗಳನ್ನು ದೋಚಿದ್ದಾರೆ.
ಜುಲೈ 13ರಂದು ಬೆಳಗ್ಗೆ 11 ಗಂಟೆ ಅವಧಿಗೆ ಮನೆಯವರೆಲ್ಲರೂ ಹೊರಗೆ ಹೋಗಿದ್ದರು. ಸಂಜೆ 4.30ರ ವೇಳೆಗೆ ಮನೆಗೆ ಮರಳಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಮುಖ್ಯ ಬಾಗಿಲು ಒಡೆದ ಕಳ್ಳರು ನೇರವಾಗಿ ದೇವರ ಮನೆಗೆ ತೆರಳಿ ಅಲ್ಲಿದ್ದ ಒಡವೆಗಳನ್ನು ಅಪಹರಿಸಿದ್ದಾರೆ. ಒಟ್ಟು 10 ಗ್ರಾಂ ಬಂಗಾರದ ಆಭರಣ ಹಾಗೂ 280 ಗ್ರಾಂ ಬೆಳ್ಳಿ ಆಭರಣ ನಾಪತ್ತೆಯಾಗಿದೆ. ದೇವರಿಗೆ ತೊಡಿಸುವ ಕೈ ಬಳೆ, ಉಂಗುರ, ತಿಲಕದ ಬೊಟ್ಟು, ದೀಪ, ದಂತದ ಕವಚ, ಇಲಿ, ತ್ರಿಶೂಲ, ಚೈನು, ಕರ್ಕಿಕಟ್ಟು ಮೊದಲಾದವನ್ನು ಕಳ್ಳರು ದೋಚಿದ್ದಾರೆ. ದೇವರಮನೆಯಲ್ಲಿದ್ದ ಬ್ಯಾಂಕ್ ಲಾಕರ್ ಚಾವಿಯನ್ನು ಸಹ ಕಳ್ಳರು ಬಿಟ್ಟಿಲ್ಲ. ಒಟ್ಟು 59 ಸಾವಿರ ರೂ ಮೌಲ್ಯದ ಆಭರಣಗಳು ಕಳ್ಳರ ಪಾಲಾಗಿದೆ.
Discussion about this post