ಯಲ್ಲಾಪುರ: ದೆಹಳ್ಳಿ ತಿರುವಿನಿಂದ ಬಿಸಗೋಡಿಗೆ ತೆರಳುವ ಮಾರ್ಗ ಸಂಪೂರ್ಣ ಹೊಂಡಗಳಿoದ ಕೂಡಿದೆ. ಯಾವುದೇ ವಾಹನವಾದರೂ ಇಲ್ಲಿ 1.5 ಕಿಮೀ ಸಂಚರಿಸಲು ಕನಿಷ್ಟ 20 ನಿಮಿಷ ಬೇಕು ಎಂಬುದು ಊರಿನವರ ದೂರು.
ನಾಗರಖಾನ್, ಕರುಮನೆ, ಕೆಳಗಿನಪಾಲ, ಗಣಪುಮನೆ, ಕೇಶನಮನೆ, ಕರ್ಕಿನಬೈಲ್, ಗೇರಾಳ, ಕಿಚ್ಚುಪಾಲ್, ಮೆಣಸಿನಮನೆ, ಹೊಸ್ಮನೆ, ಬೋಳಗುಡ್ಡೆ ಸೇರಿದಂತೆ ಹಲವು ಭಾಗದ ಜನರಿಗೆ ಈ ರಸ್ತೆಯಲ್ಲಿ ಸಂಚರಿಸುವುದು ಅನಿವಾರ್ಯ. ನಿತ್ಯ 200ಕ್ಕೂ ಅಧಿಕ ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಕನ್ನಡ ಶಾಲೆಗೆ ಆಗಮಿಸುವ ಮಕ್ಕಳು, ಶಿಕ್ಷಕರ ಜೊತೆ ನಿತ್ಯ ಓಡಾಟಕ್ಕೆ ರೈತರು ಇದೇ ರಸ್ತೆ ಬಳಸುತ್ತಾರೆ. ಒಂದು ಹೊಂಡ ತಪ್ಪಿಸಲು ಹೋಗಿ ಇನ್ನೊಂದು ಹೊಂಡದಲ್ಲಿ ಬೀಳುವವರು ಅಧಿಕ. ರಾತ್ರಿ ವೇಳೆಯಲ್ಲಂತೂ ಇಲ್ಲಿನ ಸಂಚಾರ ಸಾಧ್ಯವೇ ಇಲ್ಲ. ಅದಾಗಿಯೂ ಜನ ಕಷ್ಟಪಟ್ಟು ಮನೆ ಸೇರುತ್ತಾರೆ. ಅನೇಕರು ಹೊಂಡದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.
ರಸ್ತೆ ಹದಗೆಟ್ಟು ವರ್ಷ ಕಳೆದರೂ ಅದನ್ನು ಸರಿಪಡಿಸುವ ಕೆಲಸ ನಡೆದಿಲ್ಲ. 2008ರ ನಂತರ ಇಲ್ಲಿ ಡಾಂಬರೀಕರಣವೂ ಆಗಿಲ್ಲ.
Discussion about this post