ಭಟ್ಕಳ: ಕಾಯ್ಕಿಣಿ ತೆರ್ನಮಕ್ಕಿಯ ಧರ್ಮೇಂದ್ರ ವಾಮನ ಶೆಟ್ಟಿ (48) ಎಂಬಾತರು ಸ್ಮಶಾನ ಪಕ್ಕದ ಹೊಂಡದಲ್ಲಿ ಸ್ನಾನಕ್ಕೆ ಇಳಿದು ಅಲ್ಲಿಯೇ ಶವವಾಗಿದ್ದಾರೆ.
ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಧರ್ಮೇಂದ್ರ ಅವರು ಜುಲೈ 10ರಂದು ಸಂಜೆ ಅವರು ಮನೆಯಿಂದ ಕಾಣೆಯಾಗಿದ್ದರು. ಎಲ್ಲಿ ಹುಡುಕಿದರೂ ಪತ್ತೆ ಆಗಿರಲಿಲ್ಲ. ಜುಲೈ 13ರಂದು ಶವ ಹೊಂಡದಲ್ಲಿ ತೇಲುತ್ತಿರುವ ಬಗ್ಗೆ ಭಾಸ್ಕರ್ ನಾಯ್ಕ ಎಂಬಾತರು ಧರ್ಮೇಂದ್ರ ಅವರ ಪತ್ನಿ ವೀಣಾ ಅವರಿಗೆ ಫೋನ್ ಮಾಡಿ ತಿಳಿಸಿದ್ದು, ನೀರಿನಲ್ಲಿ ಮುಳುಗಿ ಸಾವನಪ್ಪಿದ ಬಗ್ಗೆ ಅವರು ಖಚಿತಪಡಿಸಿಕೊಂಡಿದ್ದಾರೆ.
Discussion about this post