ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಮಾರಿ ಜಾತ್ರೆ ಜುಲೈ 31 ಹಾಗೂ ಆಗಸ್ಟ್ 1ರಂದು ನಡೆಯಲಿದೆ.
`ಅಧಿಕ ಸಂಖ್ಯೆಯಲ್ಲಿ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಮಾರಿಯಮ್ಮನ ಆಶೀರ್ವಾದ ಪಡೆಯಬೇಕು’ ಎಂದು ಮಾರಿಕಾಂಬಾ ದೇವಸ್ಥಾನ ಆಡಳಿತ ಕಮಿಟಿಯ ಅಧ್ಯಕ್ಷ ಪರಮೇಶ್ವರ ನಾಯ್ಕ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು `ಜಾತ್ರೆಗೆ ಸಕಲ ಸಿದ್ಧತೆ ನಡೆದಿದೆ. ಜುಲೈ 23ರ ಮಂಗಳವಾರ ಮೂರ್ತಿಗೆ ಅವಶ್ಯಕ ಅಮಟೆ ಮರದ ಪೂಜೆ, ಅದರ ಮುಹೂರ್ತ ನಡೆಯಲಿದೆ’ ಎಂದು ತಿಳಿಸಿದರು.
`ಜುಲೈ 26ರಂದು ಮಾರಿ ಮೂರ್ತಿ ತಯಾರಿಕಾ ಸ್ಥಳವಾದ ಆಚಾರ್ಯ ಕುಟುಂಬದ ಮಾರಿ ಗದ್ದುಗೆಗೆ ಕರೆತರಲಾಗುವುದು. ಅಲ್ಲಿಂದ ಜುಲೈ 30ರ ತನಕ ಮಾರಿ ಮೂರ್ತಿಯ ಕೆತ್ತನೆಯ ಕೆಲಸಗಳು ಮುಂದುವರೆಯಲಿದೆ. ತದನಂತರದಲ್ಲಿ ರಾತ್ರಿ ನಡೆಯಲಿರುವ ಸುಹಾಸಿನಿ ಪೂಜೆಯ ಬಳಿಕ 31ರ ಮುಂಜಾನೆ ಮಾರಿಕಾಂಬಾ ದೇವಸ್ಥಾನದ ಗದ್ದುಗೆಗೆ ಮಾರಿ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆ ತಂದು ಪೂಜೆ ಸಲ್ಲಿಸಲಾಗುತ್ತದೆ’ ಎಂದು ವಿವರಿಸಿದರು.
ಮಾರಿಕಾಂಬಾ ದೇವಸ್ಥಾನ ಆಡಳಿತ ಕಮಿಟಿಯ ಪ್ರಧಾನ ಕಾರ್ಯದರ್ಶಿ ಶ್ರೀಧರ ಬಿ. ನಾಯ್ಕ ಮಾತನಾಡಿ `ಅನಾಧಿಕಾಲದಿಂದಲು ನಡೆದು ಬಂದ ಪದ್ಧತಿಯಂತೆ ಈ ವರ್ಷವೂ ಕೂಡ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆಯಲಿದೆ’ ಎಂದರು.
Discussion about this post