ಹೊನ್ನಾವರ: ಒಂಬತ್ತು ದಿನಗಳಿಂದ ಬೆಳ್ಳಿ ಹಬ್ಬದ ಸಂಭ್ರಮ ಆಚರಿಸಿಕೊಳ್ಳುತ್ತಿದ್ದ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದ `ನವ ದಿನ ಶ್ರೀರಾಮ ಚರಿತೆ ತಾಳಮದ್ದಲೆ’ ಸರಯೂತೀರದಲ್ಲಿ ಶ್ರೀರಾಮನ ನಿರ್ಯಾಣದ ಮೂಲಕ ಸಮಾರೋಪಗೊಂಡಿದೆ.
ಹೊನ್ನಾವರದ ಕರಿಕಾನ ಅಮ್ಮನ ಸನ್ನಿಧಿಯಲ್ಲಿ ನಡೆದ ತಾಳಮದ್ದಲೆಯಲ್ಲಿ ಸೆಲ್ಕೋ ಇಂಡಿಯಾದದ ಸಿಇಓ, ಅರ್ಥದಾರಿ ಮೋಹನ ಭಾಸ್ಕರ ಹೆಗಡೆ ಕರ್ಕಿ ಹೆರವಟ್ಟ ಶ್ರೀರಾಮನ ಪಾತ್ರ ನಿರ್ವಹಿಸಿದರು. ನಿರ್ಯಾಣದ ರಾಮನ ಪ್ರೌಢಿಮೆ ಮೆರೆದರು. ಕಾಲಪುರುಷನ ಹಾಗೂ ಲಕ್ಷ್ಮಣನ ಜೊತೆಗಿನ ಸಂವಾದ ಭಾವನಾತ್ಮಕವಾಗಿ ನಿಂತಿತು. ಪ್ರೇಕ್ಷಕರ ಮನಸುಗಳೂ ಕರಗಿದವು.
ಕಾಲಪುರುಷನಾಗಿ ಸುಬ್ರಹ್ಮಣ್ಯ ಮೂರೂರು, ಲಕ್ಷ್ಮಣನಾಗಿ ಜಿ.ಕೆ.ಹೆಗಡೆ ಹರಿಕೇರಿ, ಧುರ್ವಾಸನಾಗಿ ರಾಧಾಕೃಷ್ಣ ಕಲ್ಚಾರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಹಿಮ್ಮೇಳದಲ್ಲಿ ಗೋಪಾಲಕೃಷ್ಣ ಭಟ್ಟ ಜೋಗಿನಮನೆ, ಮೃದಂಗದಲ್ಲಿ ದತ್ತಾರಾಮ ಭಟ್ಟ ಸೆಲ್ಕೊ, ಚಂಡೆ ಶಿವಾನಂದ ಕೋಟ, ಮಯೂರ ಹರಿಕೇರಿ ಇದ್ದರು.
Discussion about this post