ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನಲ್ಲಿ ಶ್ರೀ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹಾಗೂ ಶ್ರೀ ಆನಂದಭೋದೇoದ್ರ ಸರಸ್ವತೀ ಸ್ವಾಮೀಜಿ ಜುಲೈ 21ರಿಂದ ಸಪ್ಟೆಂಬರ್ 19ರತನಕ ಚಾತುರ್ಮಾಸ್ಯ ವೃತಾಚರಣೆ ನಡೆಸಲು ಸಂಕಲ್ಪ ಮಾಡಿದ್ದಾರೆ.
ಅಂದು ಬೆಳಿಗ್ಗೆ 10 ಗಂಟೆಗೆ ಭಗವಾನ್ ವ್ಯಾಸರ ಪೂಜೆ ಸಲ್ಲಿಸಿ ವೃತ ಆರಂಭಿಸಲಿದ್ದಾರೆ. ಹಿರಿಯ ಶ್ರೀಗಳ 34ನೇ ಚಾತುರ್ಮಾಸ್ಯ ವ್ರತ ಮತ್ತು ಕಿರಿಯ ಶ್ರೀಗಳ ಮೊದಲನೆಯ ಚಾತುರ್ಮಾಸ್ಯ ವ್ರತ ಇದಾಗಿದೆ. ಜುಲೈ 21ರ ಸಂಜೆ 4 ಗಂಟೆಗೆ ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಲಿದೆ. ಚಾತುರ್ಮಾಸ್ಯದ ಸಂಕಲ್ಪ ದಿನದಂದು ನಾಲ್ಕು ವೇದ, ಉಪನಿಷತ್ತುಗಳು, ಹದಿನೆಂಟು ಪುರಾಣಗಳ ಪಾರಾಯಣಗಳು ನಡೆಯಲಿವೆ. ಪ್ರತಿ ದಿನ ಮಹಾಭಾರತದ ಪ್ರವಚನಗಳು ನಡೆಯಲಿವೆ. ಈ ಸಭೆಯಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಗವಹಿಸಲಿದ್ದಾರೆ. ಪ್ರಸಿದ್ಧ ಗಾಯಕ, ತಾನ್ಸೇನ್ ಪ್ರಶಸ್ತಿ ಪುರಸ್ಕೃತ ಪಂ ಗಣಪತಿ ಭಟ್ಟ ಹಾಸಣಗಿ ಹಾಗೂ ಶಿಲ್ಪಿ ರಾಮಚಂದ್ರ ಹೆಗಡೆ ಕೆಶಿನ್ಮನೆ ಅವರನ್ನು ಗೌರವಿಸಲಾಗುತ್ತಿದೆ.
Discussion about this post