ಯಲ್ಲಾಪುರ: ಜಾನುವಾರುಗಳನ್ನು ಮೇಯಿಸಲು ಗದ್ದೆಗೆ ಹೋಗಿದ್ದ ಇಬ್ಬರು ಗೌಳಿಗರ ಮೇಲೆ ಚಿರತೆ ದಾಳಿ ನಡೆಸಿದೆ.
ಜುಲೈ 17ರ ಬೆಳಗ್ಗೆ 6.30ರ ವೇಳೆಗೆ ದೇಶಪಾಂಡೆ ನಗರದ ಸೋನು ಘಾಟು ಕೊಕ್ರೆ (32) ಹಾಗೂ ಲಕ್ಷ್ಮಣ ವಾಗು ಕೊಕ್ಕರೆ (37) ಎಂಬಾತರು ಕೊಟ್ಟಿಗೆಯಲ್ಲಿದ್ದ ದನವನ್ನು ಎಬ್ಬಿಕೊಂಡು ಹೊರಟಿದ್ದರು. ಕಾಡಂಚಿನಲ್ಲಿರುವ ಕಂಚನಳ್ಳಿಯ ಗದ್ದೆಗೆ ಅವರು ಪ್ರವೇಶಿಸುತ್ತಿದ್ದಂತೆ ಅಲ್ಲಿ ಹೊಂಚು ಹಾಕಿ ಕೂತಿದ್ದ ಚಿರತೆ ಇವರಿಗೆ ಎದುರಾಗಿದ್ದು, ಜಾನುವಾರುಗಳ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸಿದೆ.
ಆಗ ಜಾನುವಾರು ರಕ್ಷಣೆಗೆ ಪ್ರಯತ್ನಿಸಿದ ಗೌಳಿಗರು ಚಿರತೆಯಿಂದ ಗಾಯ ಮಾಡಿಕೊಂಡಿದ್ದಾರೆ. ನಂತರ ಈ ಇಬ್ಬರ ಬೊಬ್ಬೆ ಕೇಳಿ ಚಿರತೆ ಕಾಡಿನ ಕಡೆ ಹೆಜ್ಜೆ ಹಾಕಿದೆ. ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ದಾಳಿಗೆ ಒಳಗಾದವರ ಆರೋಗ್ಯ ವಿಚಾರಿಸಿದರು. ಗಾಯಗೊಂಡ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದನ ಮೇಯಿಸಲು ಹೋದವರ ಮೇಲೆ ಚಿರತೆ ದಾಳಿ

Leave a comment