ಯಲ್ಲಾಪುರ: ಜೋಗಾಳಕೇರಿ ಅಸ್ಲೇಕೊಪ್ಪದಲ್ಲಿ ಅಪಾಯದ ಅಂಚಿನಲ್ಲಿದ್ದ ನಾಲ್ಕು ಕುಟುಂಬದವರನ್ನು ಮಾವಿನಮನೆ ಗ್ರಾ ಪಂ ಅಧಿಕಾರಿ ಗಂಗಾಧರ ಭಟ್ಟ ರಕ್ಷಿಸಿದ್ದಾರೆ. ಸಂತ್ರಸ್ತರಿಗೆ ಅವರು ಆಶ್ರಯವನ್ನು ನೀಡಿದ್ದಾರೆ.
ಅಸ್ಲೇಕೊಪ್ಪದಲ್ಲಿ ತೆಂಗು ವೆಂಕಣ್ಣ ಕುಣಬಿ, ಗಣಪತಿ ತಿಮ್ಮಣ್ಣ ಕುಣಬಿ, ಗಣಪತಿ ನೆಮ್ಮ ಕುಣಬಿ ಹಾಗೂ ನೆಮ್ಮಾ ಗಣೇಶ ಕುಣಬಿ ಅಪಾಯದ ಸ್ಥಿತಿಯಲ್ಲಿದ್ದರು. ಈ ಕುಟುಂಬದವರು ವಾಸಿಸುವ ಮನೆ ತಳಭಾಗ ಹಳ್ಳ ಹರಿಯುತ್ತಿದ್ದು, ಧರೆ ಕುಸಿಯುವ ಅತಂಕ ಎದುರಾಗಿತ್ತು. ಈ ಬಗ್ಗೆ ತುರ್ತಾಗಿ ಗ್ರಾ ಪಂ ಅಧ್ಯಕ್ಷ ಸುಬ್ರಾಯ ಭಟ್ಟ ಅವರ ಜೊತೆ ಸಭೆ ನಡೆಸಿದ ಪಿಡಿಓ ಗಂಗಾಧರ ಭಟ್ಟ ಚರ್ಚಿಸಿ ಪರ್ಯಾಯ ವ್ಯವಸ್ಥೆ ಮಾಡಿದರು.
ಪ್ರಸ್ತುತ ಈ ನಾಲ್ಕು ಕುಟುಂಬದ ಸದಸ್ಯರನ್ನು ಮಲವಳ್ಳಿ ಆರೋಗ್ಯ ಕೇಂದ್ರದ ಪಕ್ಕ ಖಾಲಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಅಲ್ಲಿಗೆ ತೆರಳಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.
Discussion about this post